ಯಲ್ಲಾಲಿಂಗೇಶ್ವರ ಶ್ರೀಮಠಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟ್ಟಿ

ಯಲ್ಲಾಲಿಂಗೇಶ್ವರ ಶ್ರೀಮಠಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟ್ಟಿ Rajya Sabha member Iranna Kadadi visits Yallalingeshwara Srimatthi

ಮುಗಳಖೋಡ, 15 :  ಮಠ-ಮಠಾಧೀಶರು, ದೈವದ ಮೇಲೆ ನಂಬಿಕೆ ಉಳ್ಳವರು  ಜನಸಾಮಾನ್ಯರ ಜೊತೆಗೆ ಗುರುತಿಸಿಕೊಂಡು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಹಾಯ ಸಹಕಾರ ಮಾಡುವವರಿಗೆ ಮುಂದೊಂದು ದಿನ ರಾಜಕೀಯ ಸ್ಥಾನಮಾನಗಳು ಉನ್ನತ ಹುದ್ದೆಗಳು ಪ್ರಾಪ್ತಿಯಾಗಲಿವೆ ಎಂದು ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಅಧಿಕ ಮಾಸದ ಪ್ರಯುಕ್ತ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಶ್ರೀಮಠಕ್ಕೆ ಆಗಮಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ ಅವರು ಸೃಷ್ಟಿ ಭೂಮಂಡಲದಲ್ಲಿ ದೈವಿ ಶಕ್ತಿಗಳ ಪ್ರಭಾವಳಿಯಿಂದ ದೇವರ ಮೇಲೆ ಯಾರು ನಂಬಿಕೆ  ಇಟ್ಟಿರುತ್ತಾರೋ ದೇವರು ಯಾವತ್ತಿಗೂ ಕೈಬಿಡುವುದಿಲ್ಲ.

ರಾಜಕಾರಣದಲ್ಲಿ ತಾಳ್ಮೆ ಸಂಯಮದಿಂದ ಎಲ್ಲರ ಜೊತೆಗೆ ಬೆರೆತು ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.  ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರಿಗೆ ರಾಜಕಾರಣದಲ್ಲಿ ಉನ್ನತ ಹುದ್ದೆಗಳು ಲಭಿಸಲಿವೆ ಎಂದು ಶಾಲು ಹೊದಿಸಿ ಹೂಮಾಲೆ ಹಾಕಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ ರಾಜೀವ್, ಕಲ್ಲೋಳ್ಳಿಯ ಬಸವರಾಜ ಕಡಾಡಿ, ಕಲ್ಲೋಳಿ ಶ್ರೀ ಮಹಾಲಕ್ಷ್ಮಿ ಬ್ಯಾಂಕಿನ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಪುರಸಭೆ ಸದಸ್ಯರಾದ ಪರ​‍್ಪಗೌಡ ಖೇತಗೌಡರ, ಚೇತನ ಯಡವನ್ನವರ, ಮಹಾಂತೇಶ ಯರಡೆತ್ತಿ ಶ್ರೀಕಾಂತ ಗೌಡ ಖೇತಗೌಡರ, ಗುರು ಮಠಪತಿ ರಾಜಕುಮಾರ್ ನಾಯಕ್ ಸೋಮು ಹೊರಟ್ಟಿ, ಇತರರು ಇದ್ದರು.