ಶೇರಿಗೇರಿ ಕ್ರೀಡೆಯ ಅಂಕಣ ವೀಕ್ಷಿಸಿದ ಶಾಸಕ ಜೆ ಟಿ ಪಾಟೀಲ

MLA JT Patil watched the Sherigeri sports column

ಬೀಳಗಿ 20: ಚಿನಿಪನಿ, ಕಬ್ಬಡಿ, ಖೋಖೋ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯವನ್ನು ಹಾಗೂ ಆರೋಗ್ಯವನ್ನು ಕಪಾಡಿಕೊಳ್ಳುಬಹುದು. ಅದರಂತೆ ಶೇರಿಗೇರಿ ಅತ್ಯುತ್ತಮ ಕ್ರೀಡೆಯಾಗಿದೆ ಎಂದು ಪಟ್ಟಣದಲ್ಲಿ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ ಟಿ ಪಾಟೀಲ ಹೇಳಿದರು. 

ಹೊಸ ವರ್ಷದ ನಿಮಿತ್ಯವಾಗಿ ಬೀಳಗಿ ತಾಲೂಕ ಗೆಳೆಯರ ಬಳಗದವರು ಡಿ.30 ರಂದು ಪಟ್ಟಣದ ತಹಶಿಲ್ದಾರ್ ಕಚೇರಿ ಆವರಣದಲ್ಲಿ ಗ್ರಾಮೀಣ ಕ್ರೀಡೆ ಶೇರಿಗೇರಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಶುಕ್ರವಾರ ಅಂಕಣವನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು. 

ಇಂದು ಅನೇಕ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಇಂದಿನ ಯುವಕರು ಮತ್ತು ಮಕ್ಕಳು ಮೋಬೈಲ್ ಗೇಮ್‌ಗಳಿಗೆ ಮಾರು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ದೈಹಿಕ, ಮಾನಸಿಕವಾಗಿ ಸಧೃಡವಾಗಬೇಕಾದರೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗೆ ಮರುಜನ್ಮ ಕೊಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಕಿ ಅವರ ಗೆಳೆಯರ ಬಳಗದವರು ಈ ಕ್ರೀಡೆಯ್ನು ಆಯೋಜನೆ ಮಾಡಿದ್ದಾರೆ, ಈ ಕ್ರೀಡೆಗೆ ಎಲ್ಲರೂ ಪ್ರೋತ್ಸಾಹಿಸುವುದರ ಜೊತೆಗೆ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು, ಶೇರಿಗೇರಿ ಕ್ರೀಡೆಗಿರುವ ಮಹತ್ವ ಉಳಿದ ಯಾವ ಕ್ರೀಡೆಗೂ ಇಲ್ಲ ಎಂದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಖಂಡಿಕಿ, ಸಿದ್ದು ಸಾರಾವರಿ, ಶ್ರೀಶೈಲ ಸೋಳಿಕೇರಿ, ಪ್ರಕಾಶ್ ಚಿನವಾಲ, ಚಿದಾನಂದ ನಂದಿಹಾಳ, ಬಸವರಾಜ ಹಳ್ಳದಮನಿ, ಯಮನಪ್ಪ ರೋಳ್ಳಿ, ಶ್ರೀಕಾಂತ ತಳವಾರ ಅನೇಕರು ಉಪಸ್ಥಿತರಿದ್ದರು.