ಪಿಡಿಓ ಭಾರತಿ ಬದ್ನೂರ ವಿರುದ್ಧ ಕ್ರಮಕ್ಕೆ ಶಾಸಕ ಜೆ.ಟಿ.ಪಾಟೀಲ್ ಸೂಚಿಸಿ
ಕೆರೂರ 29: ಬದಾಮಿ ತಾಲೂಕಿನ ಬಿಳಗಿ ಮತಕ್ಷೇತ್ರದ ನರೇನೂರ ಗ್ರಾಮದಲ್ಲಿ ಸಮುದಾಯ ಭವನ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರಿದ. ಹಾಗೂ ಸಾರ್ವಜನಿಕರ ಕುಂದು ಕೊರತೆ ಕೇಳದ ಪಕೀರಬೂದಿಹಾಳ ಅಭಿವೃದ್ಧಿ ಅಧಿಕಾರಿ ಭಾರತಿ ಬದ್ನೂರ ವಿರುದ್ಧ ಕ್ರಮ ಕೈಗೊಳ್ಳಲು ಜಿ ಪಂ ಸಿಇಒಗೆ ಶಾಸಕ ಜೆ.ಟಿ.ಪಾಟೀಲ್ ಸೂಚಿಸಿದರು.
ಅವರು ನರೇನೂರು ಗ್ರಾಮದಲ್ಲಿ ಭರಮದೇವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿದ ನಂತರ ಗ್ರಾಮಸ್ಥರ ಸಭೆ ನಡೆಸಿ ಅಹವಾಲಗಳನ್ನು ಆಲಿಸಿದರು.
ಗ್ರಾಮಸ್ಥರು ಪಿಡಿಓ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದನೆ ಮಾಡದೆ ನಿರ್ಲಕ್ಷ ತೂರಿದ್ದಾರೆ. ಚರಂಡಿಗಳು ಸ್ವಚ್ಛಗೊಳಿಸದೆ ಸುಮಾರು 3 4 ತಿಂಗಳ ಆಗಿವೆ ಚರಂಡಿ ಗಳು ಸ್ವಚ್ಛಗೊಳಿಸದೆ ಇರುವರಿಂದ ಸೊಳ್ಳೆ ಹಾವಳಿ ಹೆಚ್ಚಾಗಿವೆ. ರೋಗ ರುಜಿನ ಭೀತಿ ಕಾಡುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಉತ್ತರಿಸಬೇಕಾಗಿದ್ದ ಪಿಡಿಓ ಸ್ಥಳದಲ್ಲಿ ಇರಲಿಲ್ಲ. ಆಗ ಶಾಸಕರು ಪಿಡಿಓ ಅವರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಸಭೆಯ ಸ್ಥಳಕ್ಕೆ ಕರೆಸಿದರು. ನರೇನೂರು ಗ್ರಾಮದಲ್ಲಿ 4 ಗಂಟೆಗೆ ಕಾರ್ಯಕ್ರಮ ಇದ್ದು ಐದು ಗಂಟೆಯಾದರೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷವೇಕೇ ಎಂದು ಪ್ರಶ್ನಿಸಿದರು. ಅಲ್ಲದೆ ನರೇಗಾದಲ್ಲಿ ಸಮರ್ಕ ಕಾರ್ಯಕ್ರಮಗಳು ಹಾಕಿಕೊಂಡಿಲ್ಲ. ಸಾರ್ವಜನಿಕರ ಸಮಸ್ಯೆಗಳು ಹೇಳದಿದ್ದರೆ ಕೇವಲ ಪಗಾರ ಪಡೆಯಲು ಇದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಜಿ ಪಂ ಸಿಇಓ ಅವರಿಗೆ ಕರೆ ಮಾಡಿ ಬೀಳಿಗಿ ಮತಕ್ಷೇತ್ರದಲ್ಲಿ ಕೆಲವು ಪಿಡಿಓಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮ ಕರ್ತವ್ಯದತ್ತ ನಿರ್ಲಕ್ಷ್ಯ ವಹಿಸಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ ಕರ್ತವ್ಯ ನಿರ್ಲಕ್ಷ ವಹಿಸಿದ ನಾಲ್ಕು ಐದು ಪಿಡಿಓ ಗುರುತಿಸಿ ಅಮಾನತು ಮಾಡಿ ಚುರುಕು ಮುಟ್ಟಿಸಿ. ನರೇಗಾ ಯೋಜನೆಯಲ್ಲಿ ಸಮುದಾಯ ಭವನಗಳು, ಅಂಗನವಾಡಿ ಕಟ್ಟಡಗಳು, ಸಿಸಿ ರಸ್ತೆಗಳು, ಶಾಲಾ ಕಟ್ಟಡಗಳು ಇನ್ನು ಹಲವು ಕಾರ್ಯ ಮಾಡುವ ಅವಕಾಶಗಳು ಇದ್ದರೂ ಮಾಡುತ್ತಿಲ್ಲ. ಫಕೀರ ಬೂದಿಹಾಳ ಗ್ರಾಪಂ ಪಿಡಿಒ ಮೇಲೆ ಶಿಸ್ತುಕ್ರಮ ಕೈಗೊಳ್ಳಿ. ಇಲ್ಲವಾದರೆ ನಾವು ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಶಾಸಕ ಜೆ.ಟಿ. ಪಾಟೀಲರು ದೂರವಾಣಿ ಮೂಲಕ ಖಡಕ ಆಗಿ ಸಂದೇಶ ರವಾನಿಸಿದರು.