ಶಾಸಕ ಹಿಟ್ನಾಳ ಗೆ ಸಚಿವ ಸ್ಥಾನ ದೊರೆಯಲಿ -ಮೈಲೈಕ್ ಜಿಲಾನ್ ಆಶಯ
ಕೊಪ್ಪಳ 20; ಜಿಲ್ಲಾ ಕೇಂದ್ರವಾದ ಕೊಪ್ಪಳ ವಿಧಾನಸಭಾ ಕ್ಷೇತ್ರ ದಿಂದ ಮೂರನೇ ಬಾರಿಗೆ ಜಯಸಾಧಿಸಿ ಶಾಸಕರಾಗಿ ಆಯ್ಕೆಗೊಂಡ ಹ್ಯಾಟ್ರಿಕ್ ಹೀರೋ ಕೆ, ರಾಘವೇಂದ್ರ ಹಿಟ್ನಾಳ ರವರಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯಲ್ಲಿ ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಎಂಡಿ ಜಿಜಲಾನ್ ಕಿಲ್ಲೆದಾರ (ಮೈಲೈಕ್) ಆಶಯ ವ್ಯಕ್ತಪಡಿಸಿದ್ದಾರೆ, ಅವರು ಕೆ ರಾಘವೇಂದ್ರ ಹಿಟ್ನಾಳ್ ರವರಿಗೆ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಶುಭ ಕೋರಿದ ಬಳಿಕ ತಮ್ಮ ಆಶಯವನ್ನು ವ್ಯಕ್ತಪಡಿಸಿ ಮಾತನಾಡಿ ಕೊಪ್ಪಳ ಕ್ಷೇತ್ರದ ಸರ್ವಾಂಗಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರನ್ನು ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ, ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಸನ್ನ ಗಡಾದ್, ಮತ್ತು ಅಂಜುಮನ್ ಕಮಿಟಿಯ ಕಾರ್ಯದರ್ಶಿ ಸಿರಾಜ್ ಮನಿಯಾರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.