ಕೊಪ್ಪಳ 27 : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಕಾರ್ಯಕ್ರಮ ಈಶ್ವರಗುಡಿ ಆವರಣದಲ್ಲಿ ಅತ್ಯಂತ ವಿಜೃಂಬಣೆಯಿಂದ ನಡೆಯಿತು ಶಿವರಾತ್ರಿ ಪ್ರಯು ಈಕ್ತ ವೈವಿಧ್ಯಮಯ ಶಿವಲಿಂಗುಗಳಾದ ಬೆಳಕಿನ ಲಿಂಗು ಪುಷ್ಪಲಿಂಗು ಉದ್ಬವಲಿಂಗು, ಸಹಸ್ರಲಿಂಗು ಅಂತರ್ಲಿಂಗುಗಳ ದರ್ಶನ ಏರಿ್ಡಸಲಾಗಿತ್ತು.
ಆಧ್ಯಾತ್ಮ ಮೌಲ್ಯ ಜಾಗೃತಿ ಮಂಟಪ ಪ್ರೊಜೆಕ್ಟರ್ ಶೋ, ಶಿವನೊಂದಿಗೆ ಸೆಲ್ಫಿ ಅತ್ಯಾಕರ್ಷಕವಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಮಾತನಾಡಿ ವರ್ತಮಾನ ಸಮಯದಲ್ಲಿ ನಾವು ಆಧ್ಯಾತ್ಮವನ್ನು ಜೊತೆ ಮಾಡಿಕೊಂಡಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಸೃಷ್ಟಿಕರ್ತ ಶಿವನ ನೆನಪಿನಲ್ಲಿದ್ದಾಗ ಎಂತಹ ಕಷ್ಟ ಪರಿಸ್ಥಿತಿಯಲ್ಲಿಯೂ ನಾವು ಪಾರಾಗಲು ಸಾಧ್ಯ ಎಂದರು. ಬ್ರಹ್ಮಕುಮಾರಿ ಯೋಗಿನಿ ಅಕ್ಕ ಶಿವರಾತ್ರಿಯ ಆಧ್ಯಾತ್ಮ ರಹಸ್ಯವನ್ನು ತಿಳಿಸುತ್ತಾ ಶಿವ ಇದೊಂದು ಸಂಸ್ಕೃತ ಶಬ್ದ ಇದರ ಅರ್ಥ ಶುಭಕಾರಿ ಮಂಗಳಕಾರಿ ಕಲ್ಯಾಣಕಾರಿ ಜಗತ್ತಿಗೆ ಸದಾ ಒಳ್ಳೆಯದನ್ನು ಮಾಡುವವನೇ ಶಿವ ಅವನೇ ಸೃಷ್ಟಿಕರ್ತ ಜಗದೀಶ್ವರ ವಿಶ್ವೇಶ್ವರ ಸರ್ವಶಕ್ತಿವಂತನಾಗಿದ್ದಾನೆ. ಸರ್ವಧರ್ಮದವರು ಅವನನ್ನು ಬೇರೆ ಬೇರೆ ಶಬ್ದಗಳಾದ ಈಶ್ವರ ಅಲ್ಲಾ ಗಾಡ್ ಓಂಕಾರ್,ಅರಿಹಂತ ಎಂದು ಪ್ರಾರ್ಥಿಸುತ್ತಾರೆ. ಪರಂಜ್ಯೋತಿ ಸ್ವರೂಪನಾದ ಶಿವನು ಕಲಿಯುಗಿ ಅಂಧಕಾರದ ಸಮಯದಲ್ಲಿ ಅಜ್ಞಾನವೆಂಬ ರಾತ್ರಿಯಲ್ಲಿ ಅವತರಿಸಿ ಜಗತ್ತಿಗೆ ಸತ್ಯ ಅಧ್ಯಾತ್ಮ ಜ್ಞಾನದ ಬೆಳಕನ್ನು ನೀಡುತ್ತಿದ್ದಾನೆ ಇದರ ಪ್ರತೀಕವಾಗಿ ಆಚರಿಸುವ ಹಬ್ಬವೇ ಮಹಾಶಿವರಾತ್ರಿ. ಬೆಳಕು ಬಂದಾಗ ಕತ್ತಲು ಹೇಗೆ ದೂರ ಹೋಗುತ್ತದೆಯೋ ಹಾಗೆ ಪರಮಾತ್ಮ ಶಿವನ ಸತ್ಯ ಜ್ಞಾನದ ಬೆಳಕಿನಿಂದ ಮನುಷ್ಯನ ಆಂತರ್ಯದಲ್ಲಿರುವ ದುಃಖ ಅಶಾಂತಿ ದೂರವಾಗಿ ಸತ್ಯವಾದ ಶಾಂತಿ ನೆಮ್ಮದಿ ಖುಷಿ ಪ್ರಾಪ್ತಿಯಾಗುತ್ತದೆ ಎಂದರು ಉಪವಾಸ ಎಂದರೆ ಉಪ ಅಂದರೆ ಹತ್ತಿರ ವಾಸ ಅಂದರೆ ಇರುವುದು ಶಿವನ ಹತ್ತಿರ ವಾಸವಾಗಿರುವುದೇ ಉಪವಾಸ ಜಾಗರಣೆ ಎಂದರೆ ಕೆಟ್ಟ ಗುಣ ಕೆಟ್ಟ ವಿಚಾರ ಎಲ್ಲಾ ಕೆಟ್ಟದರಿಂದ ಜಾಗೃತ ವಾಗಿರುವುದೇ ನಿಜವಾದ ಜಾಗರಣೆ ಎಂದರು. ವೈವಿಧ್ಯಮಯ ಜ್ಯೋತಿರ್ಲಿಂಗಗಳ ಮಂಟಪವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಮಾತನಾಡುತ್ತಾ ಆಧ್ಯಾತ್ಮ ಜ್ಞಾನದಿಂದ ಮನುಷ್ಯ ಸ್ವಪರಿವರ್ತನೆಯಾಗಲು ಸಾಧ್ಯ ಪ್ರತಿಯೊಂದು ಹಬ್ಬಗಳು ಸ್ವಪರಿವರ್ತನೆ ಸ್ವಉನ್ನತಿಯ ಮಾರ್ಗವನ್ನು ಹಾಗೂ ಪರಮಾತ್ಮನ ಕಡೆಗೆ ಹೋಗುವ ಮಾರ್ಗವನ್ನು ತೋರಿಸುತ್ತವೆ. ನಾವು ಹಬ್ಬ ಆಚರಣೆ ಮಾಡುವುದರ ಜೊತೆಗೆ ಅದರ ಹಿಂದೆ ಇರುವ ಸತ್ಯ ವಿಚಾರವನ್ನು ತಿಳಿದು ಮಾಡಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ವೇದಿಕೆ ಮೇಲೆ ವೀರಣ್ಣ ಕಮತರ, ಶೇಖರ್ಪ,ಡಾ. ಮಹೇಶ್ ಗೋವನ್ಕೊಪ್ಪ, ಜಿತೇಂದ್ರ ತಾಲೆಡಾ, ಸುಮನ್ ಉಪಸ್ಥಿತರಿದ್ದರು. ಬ್ರಹ್ಮಕುಮಾರಿ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು ವೈವಿಧ್ಯಮಯ ಜ್ಯೋತಿರ್ಲಿಂಗಗಳು ವಿಶೇಷ ಜನಮನದ ಕಣ್ತೆರೆಯಿತು. ಜನರು ಸಾಲು ಸಾಲಾಗಿ ಬಂದು ಶಿವಲಿಂಗುಗಳ ದರ್ಶನ ಪಡೆದು ತಮ್ಮ ಭಕ್ತಿ ಭಾವವನ್ನು ಸಮರ್ಿಸಿ ಧನ್ಯರಾದರು.