ಲೋಕದರ್ಶನ ವರದಿ
ಧಾರವಾಡ30 : ಕಳೆದ ಹಲವು ವರ್ಷಗಳಿಂದ ದುರಸ್ತೆ ಕಾಣದೆ ನೆನೆಗುದಿಗೆ ಬಿದ್ದಿದ್ದ ಧಾರವಾಡ ವಿಧಾನ ಸಭಾ ಕ್ಷೇತ್ರ -71ರ ವ್ಯಾಪ್ತಿಯಲ್ಲಿ ಬರುವ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಅವರು ಮಂಗಳವಾರ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯ 80 ಲಕ್ಷ ರೂಪಾಯಿ ಅನುದಾನದಲ್ಲಿ ಎಸ್ಪಿ ಕಚೇರಿಯ ಹಿಂಭಾಗದಿಂದ ಚಿಕ್ಕಮಲ್ಲಿಗೆವಾಡ ಕ್ರಾಸ್ ವರೆಗೆ ರಸ್ತೆ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಇದೇ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಅಡಿ ಗೋಲಂದಾಜ್ ಪ್ಲಾಟ್ ರಸ್ತೆ ಕಾಮಗಾರಿಗೆ 10 ಲಕ್ಷ ರೂಪಾಯಿ, ಹಾಸ್ಮಿ ನಗರ ರಸ್ತೆ ಕಾಮಗಾರಿಗೆ 25 ಲಕ್ಷ ರೂಪಾಯಿ ಹಾಗೂ ಸುಂದರ ನಗರ, ದೇನಾ ಬ್ಯಾಂಕ್ ಕಾಲೋನಿ, ಆತ್ಮಾನಂದ ನಗರದ ರಸ್ತೆ ಕಾಮಗಾರಿಗೆ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಅವರು ಭೂಮಿ ಪೂಜೆ ನೆರವೇರಿಸಿದರು.
ಅಲ್ಲದೆ, ಸ್ಥಳೀಯರ ಅಹವಾಲು ಆಲಿಸಿ, ಒಳಚರಂಡಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕ ಅಮೃತ ದೇಸಾಯಿ ಅವರು, ಈ ಬಡಾವಣೆಗಳು ಆರಂಭದಿಂದಲೂ ಮೂಲಸೌಕರ್ಯಗಳಿಂದ ವಂಚಿತವಾಗಿದ್ದವು.
ಹೀಗಾಗಿ ಆದ್ಯತೆ ಮೇಲೆ ಈ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇಂದು ಚಾಲನೆ ನೀಡಲಾಗಿದೆ. ಬರುವ ದಿನಗಳಲ್ಲಿ ಹಂತಹಂತವಾಗಿ ಎಲ್ಲ ಬಡಾವಣೆಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ಕಾಮಗಾರಿ ವೇಳೆಯಲ್ಲಿ ಸಂತೋಷ ದೇವರಡ್ಡಿ, ಜಗದೀಶ ತೋಟದ, ಹರೀಶ್ ಬಿಜಾಪುರ, ಸಂತೋಷ ಚಳಗೇರಿ, ಚಿಟಗುಬ್ಬಿ, ಶಿರಿಯಣ್ಣವರ, ಶೇಖ, ವಸಂತ ಗದಗಕರ, ಅರವಿಂದ ಹೊಂಡಪ್ಪನವರ, ಹರ್ಷ ನಾಯಕ, ದೇಶಪಾಂಡೆ, ಹೊನ್ನಪ್ಪನವರ ಪಾಟೀಲ, ಪ್ರಸನ್ನ ಶೆಟ್ಟಿ, ಸಕ್ರಿ ಜಹಗೀರದಾರ, ಪ್ರಭೂ ಹಿರೇಮಠ, ಸಂತೋಷ ಕೋಟಿ, ಶೇಖರ ಬನಸೋಡೆ, ವಸಂತ, ಮಂಜು ಚೋಳಪ್ಪನವರ, ಪವಾರ, ತೋಟದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.