ನಿರ್ಮಾಣ ಕಾರ್ಯಾದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ಎಮ್.ಐಹೊಳೆಯವರು ವಿತರಣೆ
ರಾಯಬಾಗ, 18; ಮನೆ ಫಲಾನುಭವಿಗಳು ಸರ್ಕಾರ ನೀಡುವ ಹಣದೊಂದಿಗೆ ತಾವು ಕೂಡ ತಮ್ಮ ಹಣವನ್ನು ಹಾಕಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.ಮಂಗಳವಾರ ತಾಲೂಕಿನ ಯಂಡ್ರಾವ ಗ್ರಾಮದ ಪಂಚಾಯತ ಕಾರ್ಯಾಲಯದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ಬಸವ ವಸತಿ ಗ್ರಾಮೀಣ (ಹೆಚ್ಚುವರಿ) ಯೋಜನೆಯಡಿ ಮಂಜೂರಾದ 29 ಮನೆಗಳ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮವನ್ನು ಸ್ವಚ್ಛವಾಗಿಡಲು ಸರ್ಕಾರದ ಸಹಾಯ ಧನದ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕೆಂದರು.
ಗ್ರಾ.ಪಂ.ಪಿಡಿಒ ಮಂಜುನಾಥ ಕಂಠಿಕಾರ, ಅಧ್ಯಕ್ಷೆ ಅಶ್ವಿನ ಧನಗರ, ಉಪಾಧ್ಯಕ್ಷೆ ಅಕ್ಕವ್ವ ಐಹೊಳೆ, ಕಲ್ಲಪ್ಪ ನಿಂಗನೂರೆ, ಸದಾಶಿವ ಘೋರೆ್ಡ, ವಿಶಾಲ ಪಡಲಾಳೆ, ಶೀಮಾ ಖೋತ, ಶಾಂತಾ ವಡ್ಡರ, ವಿನಾಯಕ ಕರಿಗಾರ ಹಾಗೂ ಗ್ರಾ.ಪಂ.ಸದಸ್ಯರು ಮತ್ತು ಫಲಾನುಭವಿಗಳು ಇದ್ದರು.
ಫೋಟೊ: 18 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಯಂಡ್ರಾವ ಗ್ರಾಮದ ಪಂಚಾಯತ ಕಾರ್ಯಾಲಯದಲ್ಲಿ ಬಸವ ವಸತಿ ಗ್ರಾಮೀಣ (ಹೆಚ್ಚುವರಿ) ಯೋಜನೆಯಡಿ ಮಂಜೂರಾದ ಮನೆಗಳ ಕಾರ್ಯಾದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ಎಮ್.ಐಹೊಳೆಯವರು ವಿತರಿಸಿದರು.