ರಕ್ಕಸಕೊಪ್ಪ ಜಲಾಶಯಕ್ಕೆ ಶಾಸಕ ಬೆನಕೆ ಬಾಗಿನ ಅರ್ಪಣೆ


ಬೆಳಗಾವಿ 18: ತಾಲೂಕಿನಲ್ಲಿ ಹಾಗೂ ಮಾಹಾರಾಷ್ಟ್ರದ ಗಡಿ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿಗರ ಜೀವನಾಡಿಯ ನದಿಯಾದ ರಾಕಸಕೊಪ್ಪ ಜಲಾಶಯವು ಭತರ್ಿಯಾದ ಹಿನ್ನೆಲೆಯಲ್ಲಿ ಉತ್ತರ ಶಾಸಕ ಅನಿಲ ಬೆನಕೆ ನದಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅಪರ್ಿಸಿದರು.

ನಗರದ ಜನರಿಗೆ ಕುಡಿಯುವ ನೀರು ಒದಗಿಸುವ ರಾಕಸಕೊಪ್ಪ ಜಲಾಶಯ ತುಂಬಿರುವುದು ನಗರ ಜನತೆಗೆ ವರದಾನವಾಗಿದ್ದು, ಮುಂಬರುವ ದಿನಗಳಲ್ಲಿ ಈ ಭಾಗದ ಜನರ ಕುಡಿಯುವ ನೀರಿಗೆ ಸಮಸ್ಯೆ ಆಗದು ಎಂದು ಶಾಸಕ ಅನಿಲ ಬೆನಕೆ ಸಂತಸ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಶಾಸಕ ಅನಿಲ ಬೆನಕೆಯವರ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು.