ಶಿಗ್ಗಾಂವಿ ಮತಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಶಾಸಕ ಅಪ್ಪಾಜಿ ನಾಡಗೌಡ ಕೊಡುಗೆ ಅಪಾರ

ಆಸಿಫ್ ಕೆಂಭಾವಿ

ತಾಳಿಕೋಟೆ 27: ರಾಜ್ಯದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷದ ಗೆಲುವು ರಾಷ್ಟ್ರ ಹಾಗೂ ರಾಜ್ಯ ನಾಯಕರ ಒಗ್ಗಟ್ಟಿನ ಬಲದಿಂದ ಗೆಲುವು ಸಾಧಿಸಿರುವುದು ಎಂದು ಆಸಿಫ್ ಕೆಂಭಾವಿ ಕಾಂಗ್ರೆಸ್ ಯುವ ನಾಯಕ ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರು ತಿಳಿಸಿದರು. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಜ್ಞಾವಂತ ಮತದಾರರು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಮುಖ್ಯ ಮಂತ್ರಿಗಳ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಮತದಾರರು ಮನ್ನಣೆ ನೀಡಿದ್ದಾರೆ. ಚನ್ನಪಟ್ಟಣದ ಸಿ ಪಿ ಯೋಗೇಶ್ವರ, ಸೊಂಡೂರಿನ ಅನ್ನಪೂರ್ಣ ತುಕಾರಾಂ, ಶಿಗ್ಗಾವಿಯ ಯಾಶೀರ ಅಹ್ಮದಖಾನ ಪಠಾಣ, ಅವರ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.  

ಈ ಹಿನ್ನೆಲೆಯಲ್ಲಿ ನಡೆದ ಶಿಗ್ಗಾಂವಿ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಯಾಶೀರ ಅಹ್ಮದಖಾನ ಪಠಾಣ ಅವರ ಗೆಲುವಿಗೆ ನಮ್ಮ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ ಎಸ್ ನಾಡಗೌಡ (ಅಪ್ಪಾಜಿ) ಅವರ ಕೊಡುಗೆ ಸಹ ಅಪಾರ, ಅವರಿಗೆ ನೀಡಿರುವ ಜವಾಬ್ದಾರಿಯನ್ನು ಸಕ್ರೀಯವಾಗಿ ನಿಭಾಯಿಸಿ ಗೆಲುವಿಗೆ ಶ್ರಮ ಪಟ್ಟಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.