ಅದ್ದೂರಿಯಾಗಿ ಜರುಗಿದ ಶಾಸಕರ ಸುಪುತ್ರಿ ವಿವಾಹ

MLA's daughter's wedding was held in a grand manner

ಇಂಡಿ 07: ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಇವರ ಜೇಷ್ಠ ಸುಪುತ್ರಿ ಮದುವೆ ಸಮಾರಂಭ ಇಂಡಿ ತಾಲ್ಲೂಕಿನ ದೂಳಖೇಡ ಗ್ರಾಮದ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. 

ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಜೇಷ್ಠ ಸುಪುತ್ರಿ ಶಿವಲೀಲಾ ಮತ್ತು ಸಂಡೂರು ಗ್ರಾಮದ ಮಂಜುನಾಥ್ ವೀರಾಪುರ ಇವರ ಜೇಷ್ಠ ಸುಪುತ್ರ ಆಶೀಶ್ ಜೊತೆ, ಕಾಶಿ ಪೀಠದ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ತಡವಲಗಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಬಬಲೇಶ್ವರದ ಮಾದೇವ ಶಿವಾಚಾರ್ಯುರು ಕತ್ನಳ್ಳಿ, ಹತ್ತಳ್ಳಿ,  ಮತ್ತು ಇಂಡಿ / ಚಡಚಣ ಭಾಗದ ಎಲ್ಲಾ ಮಾಠಾದಿಶಷರ ಸಹಯೋಗದಲ್ಲಿ ವೀರಶೈವ ಲಿಂಗಾಯತ ಧರ್ಮದ ಸಂಪ್ರದಾಯಕವಾಗಿ ವಿವಾಹ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಚಿವರಾದ ಎಚ್ ಕೆ ಪಾಟೀಲ್, ಶಿವಾನಂದ ಪಾಟೀಲ, ಸಿಂದಗಿ ಶಾಸಕರಾದ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕರಾದ ಅಪ್ಪಾಜಿ ನಾಡಗೌಡ, ಬೀಳಗಿ ಶಾಸಕರಾದ ಜೆ ಟಿ ಪಾಟೀಲ, ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ ಸೇರಿದಂತೆ ಹಾಗೂ ಮಹಾರಾಷ್ಟ್ರದ ಸಚಿವರು, ಶಾಸಕರು, ಇಂಡಿ ತಾಲೂಕು ಅಧಿಕಾರಿಗಳು, ಎಸ್‌. ಪಿ, ಎ. ಸಿ, ಡಿ. ವಾಯ್‌. ಎಸ್‌. ಪಿ, ಪೊಲೀಸ್ ಸಿಬ್ಬಂದಿ, ಅರೋಗ್ಯ ಇಲಾಖೆ ಸಿಬ್ಬಂದಿ, ಇಂಡಿ ಮತ್ತು ಚಡಚಣ ತಾಲೂಕಿನ ಲಕ್ಷಾಂತರ ಜನರು ನವ ವಧು ವರರಿಗೆ ಶುಭ ಹಾರೈಸಿದರು. ವಿವಿಧ ಬಗೆಯ ರುಚಿಕರವಾದ ಸಿಹಿ ಹಾಗೂ ಖಾದ್ಯಗಳನ್ನು ತಯಾರಿಸಿ ಮದುವೆಗೆ ಬಂದ ಸರ್ವರಿಗೂ ಭೋಜನೆಯದ ವ್ಯವಸ್ಥೆ ಮಾಡಲಾಗಿತ್ತು.