ಬೆಂಗಳೂರು, ಫೆ 11, ಕನ್ನಡ ಸಂಘರ್ಷ ಸಮಿತಿಯಿಂದ ಉದಯೋನ್ಮುಖ ಕವಿ-ಕವಯತ್ರಿಯರಿಗಾಗಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂ.ಗೋವಿಂದಪೈ ನೆನಪಿನ ರಾಜ್ಯಮಟ್ಟದ ಸ್ವರಚಿತ ಕವನ ರಚನಾ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಇದುವರೆಗೆ ಒಂದೂ ಕವನ ಸಂಕಲನ ಪ್ರಕಟಿಸದಿರುವವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಕನ್ನಡ ನಾಡುನುಡಿ, ಪರಿಸರ, ಪ್ರಕೃತಿ, ಭಾತೃತ್ವ, ಸಮಾನತೆ, ಸಹಬಾಳ್ವೆ, ವಿಶ್ವಮಾನವತೆ, ಪಕ್ಷಿ-ಪ್ರಾಣಿಪ್ರೇಮ, ಮಹಿಳಾ ಸಂವೇದನೆ, ದಲಿತ ಸಂವೇದನೆ, ವೈಜ್ಞಾನಿಕ ಚಿಂತನೆ, ವೈಚಾರಿಕ ಮನೋಭಾವ ಮೊದಲಾದ ವಸ್ತು ಕೇಂದ್ರೀತ ಕವನ ಕಳುಹಿಸಬಹುದಾಗಿದೆ.ಕವನಗಳನ್ನು ಈ ಮಾಸಾಂತ್ಯದ ವೇಳೆಗೆ ಸಲ್ಲಿಸಬಹುದಾಗಿದ್ದು, ಮೊದಲನೆಯ ಬಹುಮಾನ 2ಸಾವಿರ ರೂ, ಎರಡನೆಯ ಬಹುಮಾನ 1,500 ರೂ, ಮೂರನೆಯ ಬಹುಮಾನ 1 ಸಾವಿರ ರೂ, ಸಮಾಧಾನಕರ ಬಹುದಾನ 500 ರೂ ನಿಗದಿ ಮಾಡಲಾಗಿದೆ. ಕವನ ಕಳುಹಿಸಲು ವಿಳಾಸ : ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ. ೧ ಮತ್ತು ೨, ೨ನೇ ಮಹಡಿ, ೧ನೇ ಮುಖ್ಯರಸ್ತೆ, ಮೂರನೇ ಅಡ್ಡರಸ್ತೆ, ಶ್ರೀನಿಧಿ ಬಡಾವಣೆ, ಕೋಣನಕುಂಟೆ, ಬೆಂಗಳೂರು-೫೬೦೦೬೨ ಸಂಪರ್ಕ: ೯೪೪೮೮ ೫೧೭೮೧. ಮಿಂಚಂಚೆ : drkovemragowda@gmail.com