ಎಂಜಿಐಎಂಎಸ್ ಸುವರ್ಣ ಮಹೋತ್ಸವ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿ ಸಾಧ್ಯತೆ

  ನಾಗಪುರ, ಆ 17     ಮಹಾರಾಷ್ಟ್ರದ ವಾರ್ದಾ ಜಿಲ್ಲೆಯ ಸೇವಾಗ್ರಾಮದಲ್ಲಿರುವ  ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಂಜಿಐಎಂಎಸ್) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳಲಿದ್ದಾರೆ 

  ಶನಿವಾರ ನಾಗಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬರಮಾಡಿಕೊಂಡರು 

  ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ನಿರ್ಮಿಸಿರುವ ಸಭಾಂಗಣವನ್ನು ರಾಷ್ಟ್ರಪತಿಯವರು ಲೋಕಾರ್ಪಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ 

  ಇದೇ ಸಂದರ್ಭದಲ್ಲಿ, ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸಿರುವ ಡಾ ಒ ಪಿ ಗುಪ್ತಾ, ಡಾ ಪಿ ನಾರಂಗ್, ಡಾ ಎಸ್ ಛಾಬ್ರಾ, ಡಾ ಬಿ ಎಸ್ ಗಾಗರ್್ ಮತ್ತು ಡಾ ಪಟೋಂಡ್ ಅವರನ್ನು ರಾಮನಾಥ್ ಕೋವಿಂದ್ ಸನ್ಮಾನಿಸಲಿದ್ದಾರೆ  ಬಳಿಕ  ಗಾಂಧಿ ಸೇವಾಗ್ರಾಮ ಆಶ್ರಮದಲ್ಲಿರುವ ಬಾಪು ಕುಟಿಗೆ ಭೇಟಿ ನೀಡಲಿದ್ಧಾರೆ ಎನ್ನಲಾಗಿದೆ 

  ಭಾನುವಾರ, ದೆಹಲಿಗೆ ತೆರಳುವ ಮುನ್ನ, ಮುಂಬೈನ ರಾಜಭವನದಲ್ಲಿ ಪಾರಂಪರಿಕ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.