ವಿಜಯಪುರ 13 : ಕರ್ನಾಟಕ ರಾಜ್ಯದ ಮಾಹಿತಿ ಹಕ್ಕು 2005 ರ ಕಾಯ್ದೆ ಹಾಗು ಭ್ರಷ್ಟಾಚಾರ ತೆರಿಗೆ ಆದಾಯ ದುರ್ಬಳಕೆ ಆಗದಂತೆ ತಡೆಯುವ ಹೋರಾಟಗಾರರು ಹಾಗು ಸಂಬಂಧಿಸಿದಂತೆ ಸರ್ವಜನಿಕರ ತೆರಿಗೆ ಹಣದಿಂದಲೇ ವೇತನ ಪಡೆದುಕೊಂಡು ಸ್ವಯಂ ಪ್ರೇರಿತ ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ನಿರ್ವಹಿಸಬೇಕಾದ ಸರ್ಕಾರಿ ನೌಕರರು (ಸೇವಕರು) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಜನಸಾಮಾನ್ಯರ ಕೆಲಸಗಳಿಗೆ ಸ್ಪಂದಿಸದ, ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡದ ಶಾಸಕರು, ಸಂಸತ್ ಸದಸ್ಯರು, ಮಂತ್ರಿಗಳು ಎಲ್ಲಾ ಜನಪ್ರತಿಥಿಗಳಿಗೆ ಮಾತ್ರ ಸರ್ಕಾರಿ ಅಧಿಕಾರಿಗಳ ವರ್ಗವು ವಿಧೇಯರಾಗಿ ನಡೆದುಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಸಾರ್ವಜನಿಕರು ಮೂಲಭೂತ ಸೌಕರ್ಯ ಅಥವ ಸಮಸ್ಯೆಗಳು ಮತ್ತು ಹಕ್ಕುಗಳನ್ನು ಕೇಳಲು ಬಂದರೆ ಸ್ಪಂದಿಸುವುದಿಲ್ಲ. ಭ್ರಷ್ಟಾಚಾರವನ್ನು ತಡೆಗಟ್ಟಿ ಪರಿಹಾರ, ನ್ಯಾಯ ಒದಗಿಸುವುದು ನಮ್ಮ ಗುರಿ ಎಂದು ಭಾವಿಸಿ ಕರ್ನಾಟಕ ರಾಜ್ಯ ಕೋರ್ ಕಮಿಟಿ ಸದಸ್ಯ ಮಾಹಿತಿ ಹಕ್ಕು ಬಾಳಿಕೆದಾರರು ವಿಜಯಪುರ ಜಿಲ್ಲೆ - ಜಿಲ್ಲಾಧ್ಯಕ್ಷರು ಡಾ ಎಂ. ಡಿ. ಮೇತ್ರಿ ಆದ ನಿಮ್ಮನ್ನು ತಕ್ಷಣವೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಡಾ. ರಾಘವೇಂದ್ರ. ಎಸ್. ಆರ್, ಕರ್ನಾಟಕ ರಾಜ್ಯ ಮಾನವನ ಹಕ್ಕುಗಳ ಸಂರಕ್ಷಣೆ ಅಧ್ಯಕ್ಷರು ತಿಳಿಸಿದ್ದಾರೆ
ತಮಗೆ ವಹಿಸಲಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ರಾಜ್ಯ ಮತ್ತು ಎಲ್ಲಾ ಜಿಲ್ಲಾ ಸಮಿತಿಯ ಮಾರ್ಗದರ್ಶನದ ಜೊತೆಗೆ, ಸಹಕಾರದೊಂದಿಗೆ ತಮಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವೀಯಾಗಿ ತಾವು ಹಾಗು ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ 2005 ರ ಮಾಹಿತಿ ಹಕ್ಕು ಕಾಯ್ದೆಯ ಬಳಕೆದಾರರನ್ನು ಒಂದು ಗೂಡಿಸುವ ಮೂಲಕ ಅವರಿಗೆ / ತಮಗೆ ತೊಂದರೆ ಆದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನೊಂದವರ ಧ್ವನಿಯಾಗುವಂತೆ ತಿಳಿಸುತ್ತಾ ಮಾಹಿತಿ ಹಕ್ಕು ಕಾಯ್ದೆ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿಗೆ ಯಾವುದೇ ಚ್ಯುತಿ ಬಾರದಂತೆ ಹಾಗು ಭ್ರಷ್ಟಾಚಾರ ನಿರ್ಮೂಲನೆಯತ್ತ ಪ್ರಾಮಾಣಿಕಕವಾಗಿ ಶ್ರಮಿಸುವಂತೆ ಸೂಚಿಸಲಾಗಿದೆ. ತಮಗೆ ಹೆಚ್ಚಿನ ಯೆಶಸ್ಸು ದೊರಯಲೆಂದು ಹಾರೈಸುತ್ತೇವೆ ಎಂದರು.