ಏಕದಿನ ಪಂದ್ಯದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಎಂಸಿಎ

ಮುಂಬೈಮುಂಬರುವ  ಟೀಂ ಇಂಡಿಯಾ ಮತ್ತು  ವೆಸ್ಟ್ ಇಂಡೀಸ್  ನಡುವಿನ  ನಾಲ್ಕನೆ ಟೆಸ್ಟ್  ಪಂದ್ಯ  ಮುಂಬೈನಲ್ಲಿ  ನಡೆಯೋದು ಅನುಮಾನದಿಂದ ಕೂಡಿದೆ.

ಆಟಗಾರರಿಗೆ ವೇತನ ಪಾವತಿ  ಮತ್ತು  ಟಿಕೆಟ್  ಹಂಚಿಕೆ  ಸಂಬಂಧ ವಿಷಯಗಳು  ಮುಂಬೈ ಕ್ರಿಕೆಟ್  ಅಸೋಸಿಯೇಷನ್ ಗೆ(ಎಂಸಿಎ) ದೊಡ್ಡ  ಇಕ್ಕಟ್ಟಿಗೆ ಸಿಲುವಂತೆ ಮಾಡಿದ್ದು ನಾಲ್ಕನೆ ಪಂದ್ಯದ ಆತಿಥ್ಯವನ್ನ  ಕಳೆದುಕೊಳ್ಳುವ ಭೀತಿಯಲ್ಲಿದೆ. ಕ್ರಿಕೆಟ್  ಆಡಳಿತ  ಸಮಿತಿಯ ವಿ.ಎನ್. ಕಾಂಡೆ  ಮತ್ತು  ಹೇಮಂತ್  ಗೋಖಲೆ  ಎಂಸಿಎ ಆಡಳಿತವನ್ನ  ಇದುವರೆಗೂ  ನೋಡಿಕೊಳ್ಳುತ್ತಿದ್ದರು.  ಇದೀಗ  ಇವರ ಆಡಳಿತ ಅವಧಿ  ಮೊನ್ನೆ ಸೆಪ್ಟೆಂಬರ್  15ಕ್ಕೆ  ಮುಗಿದಿದ್ದರಿಂದ  ಆಡಳಿತ ವ್ಯವಸ್ಥೆ  ಅಧೋಗತಿ  ಸಾಗಿದೆ ಎಂಸಿಎ  ತನ್ನ ಸಿಬ್ಬಂದಿಗಳಿಗೆ ವೇತನ ನೀಡಿಲ್ಲಇದಲ್ಲದೇ ಹೋಟೇಲ್  ಬಿಲ್ಮೊನ್ನೆ  ಮುಂಬೈ ತಂಡದ  ಆಟಗಾರರಿಗೆ ವೇತನ ಪಾವತಿಸಿಲ್ಲಇದೆಲ್ಲದಕ್ಕಿಂತ ದೊಡ್ಡ  ಸಮಸ್ಯೆ  ಎಂದರೆ  ಭಾರತ  ಮತ್ತು   ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ  ಎಂಸಿಎ  ತನ್ನ  330  ಸದಸ್ಯರಿಗೆ  ತಲಾ ನಾಲ್ಕು ಪಾಸ್ಗಳನ್ನ  ನೀಡಬೇಕಿದೆ ಇದು ಕ್ರಿಕೆಟ್ ಅಸೋಸಿಯೇಷನ್ನನ್ನ  ಇಕ್ಕಟ್ಟಿನಲ್ಲಿ   ಸಿಲುಕಿಸಿದೆ  ಸಮಸ್ಯೆ ಬಗೆಹರಿಸಲು  ಎಂಸಿಎ  ಅಧಿಕಾರಿಗಳು  ಬಿಸಿಸಿಐ ಸಿಇಒ  ರಾಹುಲ್  ಜಹೋರಿ ಅವರನ್ನ ಭೇಟಿ ಮಾಡಿದ್ದಾರೆ