ಮುಸ್ಲಿಂರಿಗೆ ಸಂವಿಧಾನ ಬದಲಾವಣೆ ಡಿಕೆಸಿ ಹೇಳಿಕೆಗೆ ಎಂ.ಬಿ.ಬಿ.ಖಂಡನೆ
ಹೂವಿನಹಡಗಲಿ 26: ಮುಸ್ಲಿಮರ ತುಷ್ಟಿಕರಣಕ್ಕೆ ಡಾಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಬದಲಾಯಿಸಲು ಡಿಕೆ ಶಿವಕುಮಾರ್ ಬದಲಾಯಿಸುತ್ತಾರೆ ಎಂದು ಹೇಳಿಕೆಗೆ ವಿಜಯನಗರ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರಾದ ಎಂ.ಬಿ.ಬಸವರಾಜ ಖಂಡಿಸಿದ್ದಾರೆ.
ಈ ಕುರಿತು ಹೇಳೆಕೆ ನೀಡಿರುವ ಅವರು ಮು’ಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತಾರಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರುಮು’ಸ್ಲಿಮರ ತುಷ್ಟಿಕರಣಕ್ಕೆ, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗಳು ಅನ್ನುವುದು ನಮ್ಮ ದೇಶದ ದುರಂತ.ಈದೇಶದ ಕಾಂಗ್ರೆಸ್ ಮುಂಖಡರಿಗೆ ನಾಚಿಕೆ ಯಾಗಬೇಕು ಎಂದು ಆರೋಪಿಸಿದರು.