ಮಹಾಲಿಂಗಪುರ: ಶಿಕ್ಷಣಾಧಿಕಾರಿ ಬಸಣ್ಣನವರ ಅಸಭ್ಯ ವರ್ತನೆ: ಆಯುಕ್ತರಿಗೆ ದೂರು

ಲೋಕದರ್ಶನ ವರದಿ

ಮಹಾಲಿಂಗಪುರ 13: ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣನವರ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ ಹಾಗೂ ಸಭೆಗೆ ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆಂದು ಆರೋಪಿಸಿ ಸೂಕ್ತ ಕ್ರಮಕ್ಕಾಗಿ ಬಾಗಲಕೋಟೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದಶರ್ಿಗಳು, ಮುಖ್ಯೋಪಾಧ್ಯಾಯರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.  

ಶಾಲಾ ವಾಹನದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕೈಗೊಂಡ ಕ್ರಮಗಳು ಹಾಗೂ ಡೊನೇಷನ್ ಹಾವಳಿ ಬಗ್ಗೆ ಚಚರ್ಿಸಲು ಮೇ.13 ರಂದು ಮಧ್ಯಾಹ್ನ 1.00 ಗಂಟೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದಶರ್ಿಗಳು ಹಾಗೂ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಅಧಿಕಾರಿ ಎ. ಕೆ. ಬಸಣ್ಣನವರ ಸಭೆಗೆ ಸುಳ್ಳು ಮತ್ತು ಅಸಮರ್ಪಕ ಮಾಹಿತಿ ನೀಡಿ, 2018 ರ ಆದೇಶವನ್ನು ಬಹಿರಂಗಪಡಿಸದೇ 2014 ರ ಆದೇಶವನ್ನು ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ ಹಾಗೂ ಆಡಳಿತ ಮಂಡಳಿಯವರ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಿರುವುದಿಲ್ಲ.  ಆಡಳಿತ ಮಂಡಳಿಯವರ ಜೊತೆ ವಾಗ್ವಾದಕ್ಕಿಳಿದು ಮನಬಂದಂತೆ ಅಸಭ್ಯವಾಗಿ ವತರ್ಿಸಿದ್ದಾರೆ ಹಾಗಾಗಿ ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸಲು ಕೋರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಸ್ಥಳೀಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಉಪನಿರ್ದೇಶಕರು  ಕ್ಯಾಮ್ಸ್ಕಾ ಕಾರ್ಯದರ್ಶಿಯವರಿಗೆ  ದೂರು ನೀಡಿರುವುದಾಗಿ ಬಾಗಲಕೋಟೆ ಜಿಲ್ಲಾ ಕ್ಯಾಮ್ಸ್ ಗೌರವಾಧ್ಯಕ್ಷ ಎಂ. ಎಸ್.ತೆಗ್ಗಿನಮಠ ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಖಾಸಗಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. 

ಸಭೆಯಲ್ಲಿ ಜಿ. ಪಂ. ಕಾರ್ಯ ನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ್ ಹಾಗೂ ಸಾರಿಗೆ ಅಧಿಕಾರಿ ಮತ್ತು ಇತರರು ಇದ್ದರು