ಎಮ್.ಎಸ್. ಶೇಷಗಿರಿ ಕಾಲೇಜಿನ ವಿದ್ಯಾರ್ಥಿ ಗಳಿಂದ ಮತದಾನ ಜಾಗೃತಿ ಅಭಿಯಾನ
ಬೆಳಗಾವಿ18: ಕೆ.ಎಲ್. ಇ. ಡಾ. ಎಮ್.ಎಸ್. ಶೇಷಗಿರಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪತ್ರಿಕೆ ಸಮೂಹದ ಅಶ್ವಿನ್ ಮುತಗೇಕರ ಮಾತನಾಡುತ್ತ ಪ್ರತಿಯೊಂದು ಮತವು ಅಮೂಲ್ಯ ವಿದ್ಯಾರ್ಥಿ ಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಹಾಗೂ ತಪ್ಪದೆ ಮತದಾನ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಬಸವರಾಜ ಕಟಗೇರಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಹಿತದೃಷ್ಠಿ ಹಾಗೂ ಅಭಿವೃದ್ಧಿಗಾಗಿ ಮತದಾನ ಮಾಡುವುದು
ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ನಂತರ ಪತ್ರಿಕಾ ಬಳಗದವರು ವಿವಿಧ ತರಗತಿಗಳಿಗೆ ಹಾಗೂ ವಸತಿನಿಲಯಕ್ಕೆ ತೆರಳಿ ವಿದ್ಯಾಥರ್ಿಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪತ್ರಿಕಾ ಬಳಗದ ಪ್ರಮೋದ ಗುಂಗಾ, ಧರ್ಮರಾಜ ಹಡಪದ ಪ್ರಾಧ್ಯಾಪಕರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.