ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಎಸ್.ಸರಶೆಟ್ಟಿ ಆಯ್ಕೆ
M.S. Sarashetty elected as the president of the taluk unit
ತಾಳಿಕೋಟೆ 19 : ಪಟ್ಟಣದ ಎ.ಪಿ.ಎಂ.ಸಿ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಎಸ್.ಸರಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಮರೇಶ ಅಂಗಡಿ (ತುಂಬಗಿ), ತಾಲ್ಲೂಕಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುರೇಖಾ ಸಾಲಂಕಿ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ರೂಢಗಿ. ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿದರಿಯವರು ಆಯ್ಕೆಯನ್ನು ಘೋಷಣೆ ಮಾಡಿದರು. ತಾಲ್ಲೂಕಿನ ಕಲಕೇರಿ, ತುಂಬಗಿ, ಚಬನೂರ, ಅಸ್ಕಿ, ಮೊದಲಾದ ಗ್ರಾಮಗಳು ಸೇರಿದಂತೆ ನಗರದ ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.
ರಾಜ್ಯಕಾರ್ಯಕಾರಿಣಿ ಸದಸ್ಯರಾದ ರಮೇಶ ಸಾಲಂಕಿ ಹಾಗೂ ಮುತ್ತು ಕಿಣಗಿ(ಬ ಬಾಗೇವಾಡಿ), ನಗರ ಘಟಕದ ಅಧ್ಯಕ್ಷ ಎಂ.ಆರ್.ಕತ್ತಿ, . ಗೌರವಾಧ್ಯಕ್ಷ ಈರಣ್ಣ ಕಲಬುರ್ಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ಶಿಲ್ಪಾ ಕಿಣಗಿ, ಯುವಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸರಶೆಟ್ಟಿ, ಗಂಗಾಧರ ಕಸ್ತೂರಿ, ಚನಬಸ್ಸು ಸರಶೆಟ್ಟಿ, ಅಶೋಕ ಬಳಗಾನೂರ, ಮುರಿಗೆಪ್ಪ ಜಮ್ಮಲದಿನ್ನಿ, ಅಣ್ಣು ವಾಲಿ, ಸಿ.ಆರ್.ಕತ್ತಿ, ಮಲ್ಲಿಕಾರ್ಜುನ ಪಾಲ್ಕಿ, ಮಹಾನಂದ ತಿಳಗುಳ, ಸಂಗೀತಾ ಬಳಗಾನೂರ ಮೊದಲಾದವರು ಉಪಸ್ಥಿತರಿದ್ದರು. ಸಂಗಮೇಶ ಪಾಲ್ಕಿ ನಿರ್ವಹಿಸಿದರು. ಜಿ.ಎಸ್. ಜಮ್ಮಲದಿನ್ನಿ, ವಂದಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 