ಕುರುಗೋಡು08: ಮಣ್ಣಿನ ಫಲವತ್ತತೆ ಹೆಚ್ಚಾಗಲು ಹಸಿರು ಎಲೆ ಗೊಬ್ಬರ ರೈತರಿಗೆ ಸಹಕಾರಿಯಾಗುತ್ತಿದೆ ಎಂದು ಕೃಷಿ ಅಧಿಕಾರಿ ಎಂ.ದೇವರಾಜ್ ಹೇಳಿದರು.
ಪಟ್ಟಣ ಸಮೀಪದ ಮುಷ್ಟಗಟ್ಟೆ ಗ್ರಾಮದಲ್ಲಿ ಸುಣಗಾರ ನಾಗಪ್ಪ ಎಂಬ ರೈತ ಬೆಳೆದ ಹಸಿರು ಎಲೆ ಗೊಬ್ಬರದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ರೈತರು ಹಸಿರು ಎಲೆ ಗೊಬ್ಬರ ಬೆಳೆಯುವುದರಿಂದ ಮಣ್ಣಿನಲ್ಲಿ ಸೂಕ್ಷ್ಮಣ ಜೀವಿಗಳು ಹೆಚ್ಚಾಗಿ ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ ಆದ್ದರಿಂದ ರೈತರು ಅಧಿಕ ಸಂಖ್ಯೆಯಲ್ಲಿ ಹಸಿರು ಎಲೆಗೊಬ್ಬರದ ಬೆಳೆಯನ್ನು ಬೆಳೆಯಲು ಮುಂದಾಗಬೇಕೆಂದು ತಿಳಿಸಿದರು. ಅಲ್ಲದೆ ಹಸಿರು ಎಲೆ ಗೊಬ್ಬರ ಬೆಳೆಯನ್ನು ಬೆಳೆಯಲು ಕೃಷಿ ಇಲಾಖೆಯಿಂದ ಪ್ರೋತ್ಸಾಹ ಧನ ಸಿಗುವುದು ರೈತರಿಗೆ ಸಂತಸ ಮೂಡಿಸಿದೆ ಎಮದರು.
ನಂತರ ಹಸಿರು ಎಲೆಗೊಬ್ಬರ ಬೆಳೆಗಾರ ಸುಣಗಾರ ನಾಗಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ಅಂಜೀನಪ್ಪ, ಪೊಂಪಾಪತಿ, ಶಾಂತಪ್ಪ, ಹೆಚ್.ವೀರಾಪುರ ಚಿದಾನಂದಪ್ಪ, ಕೆರೆಕೆರೆ ಹನುಮಂತಪ್ಪ ಸೇರಿದಂತೆ ಇತರೆ ರೈತರು ಇದ್ದರು.