ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಎಂ.ಉಸ್ಮಾನ್ ಆಯ್ಕೆ
ಕಂಪ್ಲಿ 18 ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಉಸ್ಮಾನ್ ಇವರನ್ನು ಆಯ್ಕೆ ಮಾಡಲಾಯಿತು. ಇಲ್ಲಿನ ಸಭೆಯಲ್ಲಿ ಶಾಸಕ ಜೆ.ಎನ್.ಗಣೇಶ, ಅಧ್ಯಕ್ಷ ಭಟ್ಟ ಪ್ರಸಾದ್ ಸಮ್ಮುಖದಲ್ಲಿ ಸ್ಥಾಯಿ ಸಮಿತಿ ರಚಿಸುವ ಸಂಬಂಧ ಚರ್ಚಿಸಲಾಯಿತು. ನಂತರ ಅಧ್ಯಕ್ಷ ಸೇರಿದಂತೆ 11 ಸದಸ್ಯರನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಉಸ್ಮಾನ್ ಇವರನ್ನು ಆಯ್ಕೆ ಮಾಡಲಾಯಿತು. ನಂತರ 10 ಜನ ಸದಸ್ಯರನ್ನು ಸಹ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಿಗೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ ಉಪಾಧ್ಯಕ್ಷೆ ಸುಶೀಲಮ್ಮ ಸದಸ್ಯರಾದ ಸಿ.ಆರ್.ಹನುಮಂತ ಟಿ.ವಿ.ಸುದರ್ಶನರೆಡ್ಡಿ ವೀರಾಂಜನೇಯ ಲೊಡ್ಡು ಹೊನ್ನೂರವಲಿ ರಾಮಾಂಜನೀಯಲು ಮೌಲಾ ಆಂಜನೇಯ ಸುಮಾ, ನಾಗಮ್ಮ ಗುಡುದಮ್ಮ ಸೇರಿದಂತೆ ಇತರರು ಇದ್ದರು. ಫೆ002ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಎಂ.ಉಸ್ಮಾನ್ ಇವರಿಗೆ ಮಾಲಾರೆ್ಣ ಮಾಡಿ ಗೌರವಿಸಲಾಯಿತು.