ತಾಳಿಕೋಟೆ 24: ಧರ್ಮ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಜ್ಯೋತಿಯನ್ನು ಬೆಳಗಿಸುತ್ತಿರುವ ಶ್ರೇಷ್ಠ ವ್ಯಕ್ತಿತ್ವ. ಬಾಲಶಿವಯೋಗಿ ಸಿದ್ಧಲಿಂಗದೇವರದು, ಅವರ ದಾರ್ಶನಿಕತೆ ಮತ್ತು ಕಾರ್ಯಗಳು ಮಠದ ಮಹತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಮಠಕ್ಕೆ ನಾಡಿಗೆ ಬೆಲೆಕಟ್ಟಲಾಗದ ಮುತ್ತು ದೊರೆತಿದೆ ಅವರ ದಿವ್ಯ ಆಶೀರ್ವಾದ ಎಲ್ಲರ ಜೀವನದಲ್ಲಿ ಶ್ರೇಯೋಭಿವೃದ್ಧಿಯನ್ನು ತರಲಿ ಎಂದು ರಾಜ್ಯ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ ) ಹೇಳಿದರು.
ಅವರು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಭಾಭವನ ಉದ್ಘಾಟನೆ ಹಾಗೂ 09 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸೋಮವಾರ ಮಾತನಾಡಿದರು.ಈ ಭಾಗದ ಬಡ ಕುಟುಂಬಗಳಿಗೆ ಕಲ್ಯಾಣಮಂಟಪ ಅನುಕೂಲ ತರಲಿದೆ. ದಾಸೋಹ ಸಂಸ್ಕೃತಿಯನ್ನು ಉಳಿಸಲು ಭಕ್ತರು ಮಠದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು. ಸಾನ್ನಿಧ್ಯ ವಹಿಸಿದ್ದ ಕೊಡೆಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಭಕ್ತರ ಉದ್ಧಾರಕ್ಕೆ ಮುಂದಾಗಿ ಬಡಜನರಿಗೆ ನೆರವಾಗುವಂತಹ ಬೃಹತ್ ಸಭಾ ಮಂದಿರ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದರು. ಖಾಸತೇಶ್ವರ ಮಠದ ಸಿದ್ದಲಿಂಗ ದೇವರು, ನಾವದಗಿ ಬ್ರಹನ್ಮಠದ ಪೂಜ್ಯಶ್ರೀ ರಾಜಗುರು ರಾಜೇಂದ್ರ ಒಡೆಯರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಖಾಸ್ಥತೇಶ್ವರ ಮಠದ ಆಡಳಿತಾಧಿಕಾರಿ ವೇ.ಮೂ. ಮುರುಘೇಶ ವಿರಕ್ತಮಠ, ದೇವಗಿರಿಯ ಶಿವರುದ್ರಯ್ಯ ಸ್ವಾಮೀಜಿ, ಜಾಲಿಹಾಳದ ಶಂಕ್ರಾನಂದ ಸ್ವಾಮೀಜಿ, ಸಾಮೂಹಿಕ ವಿವಾಹದ ಸಂಪೂರ್ಣ ಸೇವೆಯನ್ನು ನೀಡಿದ ಢವಳಗಿಯ ಉದ್ಯಮಿ ಬಸವಂತ್ರಾಯಗೌಡ ಬಿರಾದಾರ ಗವಾಯಿ ಬಸವರಾಜ ಭಂಟನೂರ, ದೀಪಕಸಿಂಗ್ ಹಜೇರಿ, ಲಕ್ಷ್ಮಣಸಿಂಗ್ ವಿಜಾಪೂರ, ಯಮುನೇಶ ಯಾಳಗಿ, ಶಾರದಾ ವಿಜಾಪೂರ, ನಾಗರಾಜ ಹೂಗಾರ, ಗುಂಡಣ್ಣ ಹಂದಿಗನೂರ, ಅಮರಯ್ಯ ಹಿರೇಮಠ ಮೊದಲಾದವರಿದ್ದರು.