ಕಂಪ್ಲಿಯ ವಿಜಯನಗರ ಶಾಲೆಯಲ್ಲಿ ಲಾರ್ಡ್ ಬೆಡನ್ ಪಾವೆಲ್ ಅವರ ಜನ್ಮ ದಿನಾಚರಣೆ
ಕಂಪ್ಲಿ 23: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಸ್ಥಳೀಯ ಸಂಸ್ಥೆವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರಾದ ಲಾರ್ಡ್ ಬೆಡನ್ ಪಾವೆಲ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಚಿಂತನಾ ದಿನಾಚರಣೆಯನ್ನು ವಿಜಯನಗರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಆಚರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳೊಂದಿಗೆ ಸ್ಥಳೀಯ ಸಂಸ್ಥೆಯ ಕಾರ್ಯಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಕೆ.ವಿಷ್ಣು, ಸಹಾಯಕ ಜಿಲ್ಲಾ ಆಯುಕ್ತೆ ಸೀತು ಚಕ್ರಬೋರ್ತಿ, ಸಂಸ್ಥೆಯ ಪದಾಧಿಕಾರಿಗಳಾದ ಶಶಿಕಲಾ, ರಾಜೇಶ್, ಸುನಿಲ್ ಮಾಲಿಪಾಟೀಲ್ ಹಾಗೂ ಶ್ರೀವಿದ್ಯಾ ಸ್ಕೌಟ್ ಧ್ವಜಾರೋಹಣ ಮಾಡಿ, ಲಾರ್ಡ್ ಬೆಡನ್ ಪಾವೆಲ್ ಹಾಗೂ ಲೇಡಿ ಬೆಡನ್ ಪಾವೆಲ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿವುದರ ಮೂಲಕ ಆಚರಿಸಿದರು. ನಂತರ ಸಂಸ್ಥೆಯ ಕಾರ್ಯದರ್ಶಿ ಕೆ.ವಿಷ್ಣು ಅವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡನ್ ಪಾವೆಲ್ ಅವರ ಸಂಕ್ಷಿಪ್ತ ಜೀವನ ಚರಿತ್ರೆ, ಸ್ಕೌಟ್ ಮತ್ತು ಗೈಡ್ ಮೂಡಿ ಬಂದ ರೀತಿ, ಅವರ ಆದರ್ಶಗಳನ್ನು ತಿಳಿಸಿದರು. ಕಾರ್ಯಧ್ಯಕ್ಷ ಬಸವರಾಜ್ ಮಾತನಾಡಿ, ಮಕ್ಕಳಿಗೆ ಶಿಸ್ತು, ಸಂಯಮ, ಸ್ಕೌಟ್ಸ್ ಮತ್ತು ಗೈಡ್ಸ್ ನ ನೀತಿ ನಿಯಮಗಳಿಗೆ ಬದ್ಧರಾಗಿ ದೇಶ ಸೇವೆಗೆ ಸದಾ ಸಿದ್ದರಾಗಲು ಹಾಗೂ ದೇಶಕ್ಕೆ ತಮ್ಮದೇ ಆದಂತ ಕೊಡುಗೆಯನ್ನು ಕೊಡುವಂತೆ ಪ್ರೇರೇಪಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೆಲವು ಕೌಶಲ್ಯಾಧಾರಿತ ಚಟುವಟಿಕೆಗಳಾದ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಬೆಂಕಿ ಬಳಸದೆ ಅಡಿಗೆ ತಯಾರಿ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಸುನಿಲ್ ಮಾಲಿ ಪಾಟೀಲ್ ಹಾಗೂ ರಾಜೇಶ್ ಸೇರಿದಂತೆ ಇತರರು ಇದ್ದರು.