ಶಿಕ್ಷಕರನ್ನು ಗೌರವದಿಂದ ನೋಡಿ: ವಜ್ರಮುಟ್ಟಿ

Look at the teacher with respect: Vajramutti

ಯರಗಟ್ಟಿ 24:  ವಿದ್ಯಾರ್ಥಿಗಳು ಸಂಸ್ಕಾರ ಮತ್ತು ಶಿಕ್ಷಣವನ್ನು ಕಲಿತು ಕಲಿಸಿದ ಶಿಕ್ಷಕರನ್ನು ಗೌರವದಿಂದ ನೋಡಿ ಎಂದು ನಿವೃತ್ತ ಶಿಕ್ಷಕ ಎಚ್‌. ಎಲ್‌. ವಜ್ರಮುಟ್ಟಿ ನುಡಿದರು. 

ಅವರು ಪಟ್ಟಣದ ಬಾಲಾಜಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದ ಉದ್ದೇಶಿಸಿ ಮಾತನಾಡಿದರು.  

ಆಶಾ ಪರೀಟ  ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ಪಾತ್ರ ಬಹಳಷ್ಟು ಮಹತ್ತರವಾದದ್ದು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು. 

ಎಸ್‌. ವ್ಹಿ. ಯರಡ್ಡಿ, ಬಾಬುಬೇಗ ಜಮಾದಾರ, ಗೀರೀಶಗೌಡ ಪಾಟೀಲ, ಉಮೇಶ ಅವರಾದಿ, ಕೆ. ಆರ್‌. ಬಡಿಗೇರ, ರಾಜೇಂದ್ರ ಶೆಟ್ಟಿ, ಎ. ಎಚ್‌. ವಜ್ರಮುಟ್ಟಿ, ಕೆ. ಎಫ್‌. ನದಾಫ, ಬಸವರಾಜ ಪಟ್ಟಣಶೆಟ್ಟಿ, ವ್ಹಿ. ಎನ್‌. ರಡ್ಡಿ, ಮಂಗಲಾ ಇಟ್ನಾಳ, ಎಸ್‌. ಎಸ್‌. ನದಾಫ, ಎಸ್‌. ಎಂ. ಪಾಟೀಲ ಸೇರಿದಂತೆ ಅನೇಕ ಗಣ್ಯ ಮಾನ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.