ಲೋಕದರ್ಶನ ವರದಿ
ಬೆಳಗಾವಿ 04: ಖಾನಾಪುರ ತಾಲೂಕಿನ ಗಡಿಭಾಗದ ಲೋಂಡಾ ಗ್ರಾಮದ ಬಸ್ ನಿಲ್ದಾಣದ ಪರಿಸ್ತೆಗ್ಗು ಗುಂಡಿಗೆ ಹೆದರಿ ನಿಲ್ದಾಣದ ಪರಿಸ್ಥಿತಿ ಅಯೋಮಯ.ನಿಲ್ದಾಣದ ಹೊರಗೆ ನಿಲ್ಲುತ್ತಿರುವ ಬಸ್ಸಗಳು. ಮೆಟ್ಟಿಲು ಹತ್ತಲು ಪರದಾಡುತ್ತಿರುವ ವೃದ್ದರು. ನಿಲ್ದಾಣದಲ್ಲಿ ಶೌಚಾಲಯ ಇಲ್ಲದಕ್ಕೆ ಪರಿತಪಿಸುತ್ತಿರುವ ಮಹಿಳೆಯರು. 25 ಕಿ.ಮಿ. ಸಂಚರಿಸಲು 1 ಘಂಟೆ 15 ನಿಮಿಷ. ಒಂದು ಸಂದರ್ಭದಲ್ಲಿ ಕಂಟ್ರೋಲರ್, ಮ್ಯಾಕ್ಯಾನಿಕಲ್, ಹಮಾಲರು ಇರುತ್ತಿದ್ದರು ಇಂದು ಒಬ್ಬರೂ ಇಲ್ಲದೆ ಪ್ರಯಾಣಿಕರು ಮಾಹಿತಿ ತಿಳಿಯಲು ಪರದಾಡುವ ಸ್ಥಿತಿ ಬಂದೊದಗಿದೆ.
ಪ್ರತಿ ದಿನ ನೂರಾರು ವಿದ್ಯಾಥರ್ಿಗಳು ಮತ್ತು ನೌಕರಿ ನಿಮಿತ್ಯ ಪ್ರಯಾಣಿಕರು ಖಾನಾಪೂರ, ಬೆಳಗಾವಿಗೆ ಹೋಗಿ ಬರುತ್ತಾರೆ. ಬಸ್ ಗಳು ಸರಿಯಾದ ಸಮಯಕ್ಕೆ ಇಲ್ಲದೆ ಕಾಯುತ್ತಾ ಕುಳಿತುಕೊಳ್ಳುವದು ಅನಿವಾರ್ಯ. ನಿಲ್ದಾಣದಲ್ಲಿ ಬಸ್ಸಗಳ ವೇಳಾ ಪಟ್ಟಿ ಇಲ್ಲಾ. ಹೆಚ್ಚಿನ ಮಾಹಿತಿ ಪಡೆಯಬೇಕೆಂದರೆ ಕಂಟ್ರೋಲರ್ ಇಲ್ಲ. ಈ ನಿಲ್ದಾಣಕ್ಕೆ ನೇಮಕಗೊಂಡ ಕಂಟ್ರೋಲರ್ ರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅವರು ಹೋದಾಗಿನಿಂದ ಸಪ್ಟೆಂಬರ 16 ರಿಂದ ಇಂದಿನವರೆಗೂ ಒಬ್ಬರು ಇತ್ತ ಕಣ್ಣೆತ್ತಿಯೂ ನೋಡಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಬಸ್ಸನವರು ನಿಲ್ದಾಣಕ್ಕೆ ಬರದೆ ಹೊರಗಿನಿಂದ ಹೊರಗೆ ಹೋಗುತ್ತಿದ್ದಾರೆ. ಇತ್ತ ಪ್ರಯಾಣಿಕರು ಪರದಾಡುವಂತಾಗಿದೆ. ಗೋವಾ - ಬೆಳಗಾವಿ ರಾಜ್ಯದ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ರಸ್ತೆ ನಿಮರ್ಾಣ ನಡೆಯುತ್ತಿದ್ದರಿಂದ 25 ಕಿ.ಮಿ. ಸಂಚರಿಸಲು 1 ಘಂಟೆ 15 ನಿಮಿಷ ದಿಂದ 1 ಘಂಟೆ 30 ನಿಮಿಷ ಸಮಯ ಬೇಕಾಗಿದೆ.
ನಿಲ್ದಾಣದಲ್ಲಿ ಡಾಂಬರಿಕರಣವಾಗಿಲ್ಲ. ಮಳೆಗೆ ಬಿದ್ದ ತೆಗ್ಗು ಗುಂಡಿ ಮುಚ್ಚದ್ದರಿಂದ ನಿಲ್ದಾಣಕ್ಕೆ ಬರುವ ಬಸ್ಸಗಳು ದೂರದಲ್ಲೆ ಪ್ರಯಾಣಿಕರನ್ನು ಇಳಿಸಿ ಹೊರಟಿವೆ. ನಿಲ್ದಾಣದಲ್ಲಿ ಕುಳಿತವರಿಗೆ ಯಾವ ಬಸ್ ಬಂತು ಯಾವ ಬಸ್ಸ ಹೊಯಿತು ತಿಳಿಯದಂತಾಗಿದೆ. ಎರಡು ಬದಿಯಲ್ಲಿ ಎಂಟು ಹತ್ತು ಮೆಟ್ಟಿಲು ಹತ್ತುವದು ಇಳಿಯುವದು ವೃಧ್ಧರಿಗೆ ಕಷ್ಟಕರವಾಗಿದೆ. ನಿಲ್ದಾಣದಲ್ಲಿ ಕುಳಿತವರಿಗೆ ಮಳೆಗಾಲದಲ್ಲಿ ಮಳೆ ನೀರಿನ ಸಿಂಚನ ಬೇಸಿಗೆಯಲ್ಲಿ ಧೂಳಿನ ಮಜ್ಜನ ಮಾಡಿಕೊಳ್ಳುವದು ಅನಿವಾರ್ಯ. ಹೊಸ ಬಸ್ ನಿಲ್ದಾಣ ನಿಮರ್ಾಣವಾದರು ಪ್ರಯಾಣಿಕರಿಗೆ ಅನುಕೂಲಕ್ಕಿಂತ ಅನಾನೂಕೂಲವೆ ಹೆಚ್ಚಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲ. ಮಹಿಳೆಯರು ಇದರಿಂದ ತೊಂದರೆ ಅನುಭವಿಸಬೇಕಾಗಿದೆ. ಆದಾಯ ತರಬೇಕಿದ್ದ ಎರಡು ಮಳಿಗೆ ಇದ್ದರು ಒಂದು ಮಳಿಗೆ ಮಾತ್ರ ಪ್ರಾರಂಭವಿದೆ ಇನ್ನೊಂದು ಮುಚ್ಚಿದೆ. ಹೊರ ದೇಶದ ಪ್ರವಾಸಿಗರು ಹೆಚ್ಚು ಕಾಣಸಿಗುತ್ತಿದ್ದ ಈ ನಿಲ್ದಾಣದಲ್ಲಿ ಗೋವಾ- ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ಮಾರ್ಗದ ಕೆಲಸ ನಡೆಯುತ್ತಿದ್ದರಿಂದ ಅವರ ಸಂಖ್ಯೆಯು ಕಡಿಮೆಯಾಗಿದೆ. ಗೋವಾ ಬಸ್ ಗಳು ಜಾಂಬೋಟಿ, ಚೊಲರ್ಾ ಮಾರ್ಗವಾಗಿ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರ ಸಂಖ್ಯೆಯು ಇಳಿಮುಖವಾಗಿದೆ. ಬೆಂಗಳೂರು, ಮುಂಬೈ ಇತರ ಕಡೆಯಿಂದ ಬರುವ ಪ್ರಯಾಣಿಕರು ಬಸ್ ಬಂದಾಗಿರುವದನ್ನು ಕೇಳಿ ದಿಕ್ಕು ತೋಚದೆ ಖಾನಾಪೂರ ಮಾರ್ಗವಾಗಿ ತೆರಳುವದು ಅನಿವಾರ್ಯವಾಗಿದೆ. ಇವರಿಗೆ ಮಾಹಿತಿ ನೀಡಲು ನಿಲ್ದಾಣದಲ್ಲಿ ಕಂಟ್ರೋಲರ್ ಇರುವದು ಅತ್ಯವಶ್ಯ.
***