ಇಂಡಿ ನಗರಸಭೆ ಕಾರ್ಯಾಲಯ ಮೇಲೆ ಲೋಕಾಯುಕ್ತ ದಾಳಿ

ಇಂಡಿ ನಗರಸಭೆ ಕಾರ್ಯಾಲಯ ಮೇಲೆ ಲೋಕಾಯುಕ್ತ ದಾಳಿ  Lokayukta raid on Indi City Municipal Council office

ಲೋಕದರ್ಶನ ವರದಿ   

ಇಂಡಿ 07: ವಿಜಯಪೂರ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಟಿ ಮಲ್ಲೇಶಿ ಅವರ ಮಾರ್ಗದರ್ಶನ ಮೇರೆಗೆ ವಿಜಯಪೂರ ಜಿಲ್ಲಾ ಲೋಕಾಯುಕ್ತ ಸಿಪಿಐ ಆನಂದ ಡೊಣ್ಣಿ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಹತ್ತು ಗಂಟೆಗೆ ಇಂಡಿ ನಗರಸಭೆ ಮೇಲೆ ದಾಳಿ ಮಾಡಿ ಕಡತಗಳ ಪರೀಶೀಲನೆ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಸಿಪಿಐ ಆನಂದ ಡೊಣ್ಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯಪೂರ ಜಿಲ್ಲೆಯ ಮುದ್ದೆಬಿಹಾಳ ಸಿಂದಗಿ ಆಲಮೇಲ ನಗರಸಭೆಗಳಿಗೆ  ಸೇರಿದಂತೆ ಜಿಲ್ಲೆಯ ಐದು ನಗರಸಭೆಗಳ ಮೇಲೆ ಏಕೆ ಕಾಲಕ್ಕೆ ದಾಳಿ ನಡೆಸಿದ್ದಾರೆ.

ನಂತರ ಸಾರ್ವಜನಿಕರು ಇಂಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿನ್ನೆ ವಾರ್ಡ ನಂಬರ್ 17ರ ಒಂದು ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಆ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹಾಗೂ ನಗರದ ಇನ್ನೊಂದು ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿ ಮಗುವನ್ನು ಗಾಯಗೊಳಿಸಿವೆ. ಹೀಗೆ ಆದರೆ ಹೇಗೆ? ಬಡವರ ಮಕ್ಕಳಿಗೆ ಬೆಲೆ ಇಲ್ಲವೇ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

  ತಕ್ಷಣ ಎಚ್ಚೆತ್ತುಕೊಂಡ ಲೋಕಾಯುಕ್ತ ಸಿಪಿಐ ಆನಂದ ಡೊಣ್ಣಿ ಅವರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳು ಹದೆಗಟ್ಟು ಹೋಗಿವೆ. ನಡೆದಾಡಲು ಹಾಗೂ ಮಕ್ಕಳ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ನಗರದ ರೇವಪ್ಪ ಮಡ್ಡಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಇಲ್ಲ ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರು ಕೂಡಾ ಕ್ಯಾರೇ ಅನ್ನುತ್ತಿಲ್ಲ ಹಾಗೂ ನಗರಸಭೆ ಕಾರ್ಯಾಲಯ ಅನೇಕ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಾರದೆ ಚಕ್ಕರ ಹೊಡಿಯುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾಗಿ ಕಛೇರಿಗೆ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರುಗಳ ಸುರಿಮಳೆಗಳನ್ನು ಗೈದರು.  

ಅಹವಾಲಗಳನ್ನು ಸ್ವೀಕರಿಸಿ ಮಾತನಾಡಿದ ಆನಂದ ಡೊಣ್ಣಿ ಅವರು ಇಂಡಿ ನಗರಸಭೆ ಬಗ್ಗೆ ಬೆಂಗಳೂರು ಲೋಕಾಯುಕ್ತ ಕಾರ್ಯಾಲಯಕ್ಕೆ ಹಾಗೂ ವಿಜಯಪೂರ ಲೋಕಾಯುಕ್ತ ಕಾರ್ಯಾಲಯಕ್ಕೆ ಸಾರ್ವಜನಿಕರಿಂದ ಸಾಕಷ್ಟು ಪ್ರಮಾಣದಲ್ಲಿ ದೂರುಗಳು ಬಂದಿವೆ. ಇದನ್ನು ಮನಗಂಡ ವಿಜಯಪೂರ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಟಿ ಮಲ್ಲೇಶೀ ಅವರ ಮಾರ್ಗದರ್ಶನ ಮೇರೆಗೆ ಇಂದು ಇಂಡಿ ನಗರಸಭೆ ಮೇಲೆ ದಾಳಿ ಕಡತುಗಳನ್ನು ಪರೀಶೀಲನೆ ನಡೆಸಿ ಹೆಚ್ಚಿನ ತನಿಖೆ ಮಾಡಲಾಗುವುದು ಎಂದು ಹೇಳಿದರು. ದಾಳಿ ಸಂದರ್ಭದಲ್ಲಿ ಎಎಸ್‌ಐ ಗುರು ಹಡಪದ ಹಾಗೂ ಶ್ರೀಶೈಲ ಬಳಗಾನೂರ ವಾಸಿಂ ಅಕ್ಕಲಕೋಟ ಉಪಸ್ಥಿತರಿದ್ದರು.