ಸಾಮಾಜಿಕ ನ್ಯಾಯ ನೀಡುವಾಗ ಸಚಿವ ಸ್ಥಾನ ತಪ್ಪುವುದು ಸಹಜ: ಲಕ್ಷ್ಮಣ ಸವದಿ
It is natural to miss out on a ministerial post when ensuring social justice: Laxman Savadi
ಕಾರವಾರ 07: ಸಾಮಾಜಿಕ ನ್ಯಾಯ ನೀಡುವಾಗ ಸಚಿವ ಸ್ಥಾನ ತಪ್ಪುವುದು ಸಹಜ, ಸ್ವಲ್ಪ ಮಟ್ಟಿಗೆ ಅಸಮಾಧಾನ ಇರುತ್ತದೆ. ಅದು ನಾಲ್ಕಾರು ದಿನದಲ್ಲಿ ತಿಳಿಯಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಶಿರಸಿಯಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು,’ಸಂಪುಟದಲ್ಲಿ ಅವಕಾಶ ಇರುವುದು 34 ಸಚಿವ ಸ್ಥಾನ ಮಾತ್ರ. ಸಾಮಾಜಿಕ ನ್ಯಾಯ ನೀಡುವಾಗ ಈ ರೀತಿ ಸಚಿವ ಸ್ಥಾನ ತಪ್ಪುವುದು ಸಹಜ’ ಎಂದ ಅವರು, ‘ಈ ಕುರಿತು ಶಾಸಕ ಎಚ್.ಕೆ. ಪಾಟೀಲ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದರು.
‘ಬಿ.ಎಸ್. ಯಡಿಯೂರ್ಪ ಮುಖ್ಯಮಂತ್ರಿಯಾದಾಗ ಎರಡು ಮೂರು ತಿಂಗಳು ಖಾತೆ ಹಂಚಿಕೆ ಮಾಡಿರಲಿಲ್ಲ, ಹಾಗೇ ನಾವು ಸಚಿವರೆಂದು ಹೇಳಿಕೊಂಡು ಓಡಾಡುತ್ತಿದ್ದೆವು. ಪ್ರಸ್ತುತ ಶೀಘ್ರವೇ ಖಾತೆ ಹಂಚಿಕೆಯಾಗುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೆಪಿಎಸ್ಸಿ ಸಂಸ್ಥೆಯಲ್ಲಿ ಸುಧಾರಣೆ ತರಲು ಸಮಿತಿ ರಚಿಸಲಾಗಿದ್ದು, ಅಧಿಕಾರಿಗಳ ಮಟ್ಟದಿಂದ ಸುಧಾರಣೆ ಆಗಲಿದೆ. ಕೆಪಿಎಸ್ಸಿ ಸುಧಾರಣಾ ಸಮಿತಿಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕೆಪಿಎಸ್ಸಿ ಬದಲಾಗಿ ಕೆಇಎಯಿಂದ ಪರೀಕ್ಷೆ ನಡೆಯಬೇಕು ಎನ್ನುವ ಬೇಡಿಕೆ ಇದೆ. ಆದರೆ ನಾಳೆ ಕೆಇಎಯಿಂದಲೂ ಸಮಸ್ಯೆ ಆದರೆ ಇನ್ನೊಂದು ಸಂಸ್ಥೆಯನ್ನು ರಚಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು. ‘ಬಿಡದಿ ಟೌನ್ಶಿಪ್ನ ಜನಕರು ಯಾರು ಎನ್ನುವುದು ಪರೀಶೀಲನೆ ನಡೆಸಿ, ಇದು ಯಾವಾಗ ಆರಂಭವಾಗಿದೆ ಎನ್ನುವುದನ್ನು ನೋಡಿದರೆ ಯಾರ ಯಾರ ಕಾಲದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕ್ಷೇತ್ರಗಳ ಬರ ಪರೀಶೀಲನೆ ನಡೆಸಿದ ನಂತರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಭೂಕುಸಿತ ದೊಡ್ಡ ಸಮಸ್ಯೆಯಾಗಿದ್ದು, ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಲಾಗುವುದು. ಮಳೆಯ ಕೊರತೆ ಇದ್ದು, ಪ್ರತಿ ಇಲಾಖೆಯಿಂದ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸಚಿವರ ಜೊತೆಗೆ ಶಾಸಕ ಭೀಮಣ್ಣ ನಾಯ್ಕ ,ಕಾಂಗ್ರೆಸ್ ಮುಖಂಡರು ಇದ್ದರು.
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ 