ಬಸವ ಕೇಂದ್ರದಿಂದ ಆಗಸ್ಟ್‌ 8ರಂದು ದತ್ತಿ ಉಪನ್ಯಾಸ

ಬಸವ ಕೇಂದ್ರದಿಂದ ಆಗಸ್ಟ್‌ 8ರಂದು ದತ್ತಿ ಉಪನ್ಯಾಸ  Endowment lecture by Basava Kendra on August 8

ಲೋಕದರ್ಶನ ವರದಿ  

ಹುಬ್ಬಳ್ಳಿ, ಆ.7: ಬಸವ ಕೇಂದ್ರದ ವತಿಯಿಂದ ಲಿಂಗೈಕ್ಯ ಶ್ರೀ ಬಸವಣ್ಣೆಪ್ಪ ಹಳ್ಯಾಳ ಹಾಗೂ ಲಿಂಗೈಕ್ಯ ಶ್ರೀ ಬಸವಂತಪ್ಪ ರೂಡಗಿ ಅವರ ಸ್ಮರಣಾರ್ಥ ಆಗಸ್ಟ್‌ 8ರಂದು ಸಂಜೆ 6 ಗಂಟೆಗೆ ನಗರದ ಗೋಕುಲ ರಸ್ತೆ, ಅಕ್ಷಯ ಪಾರ್ಕ, ರವಿ ನಗರ ಕ್ರಾಸ್ನಲ್ಲಿರುವ ಬ್ರೈಟ್ ಬಿಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.  ಧಾರವಾಡ ಕರ್ನಾಟಕ ಕಾಲೇಜಿನ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಶ್ರೀ ಸಿದ್ಧಾರೂಢ ಮಠದ ಪರಮ ಪೂಜ್ಯ ಡಾ. ಆನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.  

ಬೈಲಹೊಂಗಲ ತಾಲ್ಲೂಕಿನ ಹೊಸೂರಿನ ಸಂಗೀತ ಕಲಾವಿದ ವಿವೇಕ ಯಡಾಳ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.  ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಅಧ್ಯಕ್ಷತೆ ವಹಿಸಲಿದ್ದು, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ್ ಡಿ. ಹೊರಕೇರಿ ಈ ಕುರಿತು ಮಾಹಿತಿ ನೀಡಿದ್ದಾರೆ.  ಪ್ರೊ. ಜಿ.ಬಿ. ಹಳ್ಯಾಳ, ಡಾ. ಪ್ರಸಾದ್ ರೂಡಗಿ ಹಾಗೂ ಸುಮಂಗಲಾ ಪ್ರಸಾದ್ ರೂಡಗಿ ಅವರು ಕಾರ್ಯಕ್ರಮದ ಆಯೋಜಕರಾಗಿದ್ದು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಸುರೇಶ್ ಡಿ. ಹೊರಕೇರಿ ಮನವಿ ಮಾಡಿದ್ದಾರೆ.