ಬಾಗಲಕೋಟೆ ಲೋಕಸಭಾ ಚುನಾವಣೆ-2019 ವೇಳಾ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಏಪ್ರೀಲ್ 23 ರಂದು ಮತದಾನ

ಬಾಗಲಕೋಟೆ: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆ-2019 ಘೋಷಿಸಿದ್ದು, ಜಿಲ್ಲೆಯಲ್ಲಿ ಏಪ್ರೀಲ್ 23 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್.ರಾಮಚಂದ್ರನ್ ತಿಳಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾರ್ಚ 28 ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಮಾನಪತ್ರ ಸಲ್ಲಿಸಲು ಕೊನೆಯ ದಿನ ಏಪ್ರೀಲ್ 4 ಆದರೆ ನಾಮಪತ್ರ ಪರಿಶೀಲನೆ ಏಪ್ರೀಲ್ 5 ಆಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ಏಪ್ರೀಲ್ 8 ಆಗಿದೆ. ಮತದಾನ ಏಪ್ರೀಲ್ 23 ರಂದು ನಡೆಯಲಿದ್ದು, ಮತ ಏಣಿಕೆ ಮೇ 23 ರಂದು ನಡೆಯಲಿದೆ. ಚುನಾವಣಾ ಆಯೋಗ ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಅಭ್ಯಥರ್ಿಗಳಿಗೆ ಒಟ್ಟು ರೂ.70 ಲಕ್ಷ ವರೆಗೆ ಖಚರ್ು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

   ಚುನಾವಣೆಗೆ ಘೋಷಣೆಯಾದಾಗಿನಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಬರುವದರಿಂದ ಜಿಲ್ಲೆಯಲ್ಲಿನ ಎಲ್ಲ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್ ತೆಗೆಯಲು ಕ್ರಮ ಜರುಗಿಸಲಾಗಿದೆ. ಸರಕಾರಿ ವಸತಿ ಗೃಹ ಹಾಗೂ ವಾಹನಗಳನ್ನು ಅಧಿಗೃಹಿಸಲಾಗಿದೆ. ಮಾದರಿ ನೀತಿ ಸಂಹಿತೆ ಪಾಲನೆಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಚೆಕ್ಪೋಸ್ಟಗಳನ್ನು ಕೂಡಲೇ ಕಾರ್ಯಗತಗೊಳಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ 140 ಸೆಕ್ಟರ ಅಧಿಕಾರಿಗಳು, 45 ಪ್ಲೈಯಿಂಗ್ ಸ್ಕ್ವಾಡ್, 23 ಸ್ಟ್ಯಾಟಿಕ್ ಸವರ್ೇಲನ್ಸ ತಂಡ, ವಿಡಿಯೋ ಸವರ್ೇಲನ್ಸ್ ಹಾಗೂ 8 ವಿಡಿಯೋ ವೀವಿಂಗ್ ತಂಡಗಳನ್ನು ರಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿರುವ 7 ಮತಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ಮತಕ್ಷೇತ್ರ ಸೇರಿ ಜನವರಿ 1ಕ್ಕೆ ಅರ್ಹತಾ ದಿನಾಂಕವನ್ನಾದರಿಸಿ ಜನವರಿ 16 ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 16,87,117 ಮತದಾರರಿದ್ದು, ಅದರಲ್ಲಿ 844513 ಪುರುಷರು, 842513 ಮಹಿಳಾ ಹಾಗೂ 91 ಇತರೆ ಮತದಾರರು ಇದ್ದಾರೆ. 1938 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾರರ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ಅಜರ್ಿ ಸಲ್ಲಿಸಬಹುದಾಗಿದೆ. ಪರಿಷ್ಕರಣೆ ಕಾರ್ಯದಲ್ಲಿ ನಮೂನೆ-6ಕ್ಕೆ 12556, ನಮೂನೆ-7ಕ್ಕೆ 8944, ನಮೂನೆ-8ಕ್ಕೆ 4511 ಹಾಗೂ ನಮೂನೆ-8ಎಗೆ 691 ಅಜರ್ಿಗಳನ್ನು ಬಂದಿರುವುದಾಗಿ ತಿಳಿಸಿದರು.

ಭಾರತ ಚುನಾವನಾ ಆಯೋಗದ ಸೂಚನೆಗಳ ಪ್ರಕಾರ ಕನರ್ಾಟಕ ರಾಜ್ಯವು ಇಆರ್ಓ ನೆಟ್ ಕೇಂದ್ರೀಕೃತ ಮತದಾರರ ಪಟ್ಟಿಯ ನಿರ್ವಹಣಾ ವ್ಯವಸ್ಥೆಗೆ ಮಾಪರ್ಾಡುಗೊಳಿಸಲಾಗಿದೆ. ಪೋರ್ಟಲ್ ನಲ್ಲಿ ಆನ್ಲೈನ್ ಅಜರ್ಿ ನಿಲ್ಲಿಸಲಾಗಿದ್ದು, ಪೋರ್ಟಲ್ ನಲ್ಲಿ ಮಾತ್ರ ಅಜರ್ಿ ಸಲ್ಲಿಸಬಹುದಾಗಿದೆ. ಅಲ್ಲದೇ ಈಗಾಗಲೇ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಪರಿಶೀಲು ತಾಲೂಕಾ ಕಚೇರಿಯಲ್ಲಿ ಪ್ರಾರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪಕರ್ಿಸಿ ಪಡೆಯಬಹುದಾಗಿದೆ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 1719 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ರಪ್ರಿಸೈಡಿಂಗ್ ಅಧಿಕಾರಿ ಹಾಗೂ 3 ಜನ ಪೋಲಿಂಗ್ ಅಧಿಕಾರಿ ಸೇರಿ ಒಟ್ಟು 4 ಜನ ಸಿಬ್ಬಂದಿಗಳನ್ನು ನೇಮಿಸಬೇಕಾಗಿದ್ದು, ಶೇ.20 ರಷ್ಟು ಹೆಚ್ಚುವರಿ ಮತದಾನ ಸಿಬ್ಬಂದಿಗಳ ಆಯ್ಕೆ ಮಾಡಬೇಕಾಗಿರುವುದರಿಂದ ವಿವಿಧ ಇಲಾಖೆಗಳಿಂದ ಒಟ್ಟು 8252 ಸಿಬ್ಬಂದಿಗಳ ಅವಶ್ಯಕತೆ ಇದ್ದು 10174 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ರವಿವಾರ ಸಂಜೆ ಇಂದಲೇ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಕೆಲೂರಿನಲ್ಲಿ ಅಕ್ರಮ ಮಧ್ಯಮಾರಾಟವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದ ನಿಟ್ಟಿನಲ್ಲಿ ರೇಡ್ ಮಾಡಲಾಗಿದೆ. ಅಲ್ಲದೇ ಬ್ಯಾಂಕ್ಗಳು ಹಣ ಸರಬರಾಜುವಿನಲ್ಲಿ ಅಗತ್ಯವಾದ ದಾಖಲೆಗಳ ಮಾಹಿತಿ ಕೊಡಬೇಕು ಎಂದರು.

ಜಿಲ್ಲಾ ಪಂಚಾಯತ ಸಿಇಓ ಹಾಗೂ ಸ್ವೀಪ್, ಎಂಸಿಸಿ ನೋಡಲ್ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಮುಂದೆ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ ಮಟ್ಟದಲ್ಲಿ ಬೀದಿನಾಟಕ, ವಿವಿಧ ಸ್ಪಧರ್ೆಗಳು, ಕಲಾಜಾಥಾ, ಚಿತ್ರ ಸಂತೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಾತರ್ಾ ಇಲಾಖೆ ಹೊರತಂದ 1957 ರಿಂದ 2014 ವರೆಗಿನ ಲೋಕಸಭಾ ಚುನಾವಣಾ ಹಿನ್ನೋಟದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ, ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿ ದುಗರ್ೇಶ ರುದ್ರಾಕ್ಷಿ, ಚುನಾವಣಾ ತಹಶೀಲ್ದಾರ ಪಾಂಡವ ಸೇರಿದಂತೆ ಇತರರು ಉಪಸ್ಥಿತರಿದ್ದರು.