ಕಾರವಾರ 11: ಚುನಾವಣಾ ಆಯೋಗದ ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1437 ಮತಗಟ್ಟೆಗಳನ್ನು ಹೊಂದಿದೆ. ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು ಸಹ ಇವೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರಗಳು ಸಹ ಕೆನರಾ ಲೋಕಸಭಾ ವ್ಯಾಪ್ತಿಗೆ ಬರುತ್ತಿದ್ದು ಅಲ್ಲಿ 485 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಇದೇ ವರ್ಷದ ಜ.1 ರಿಂದ ಜ.16 ರವರೆಗೆ ಸಿದ್ದಗೊಂಡ ಮತದಾರರ ಪಟ್ಟಿಯಲ್ಲಿ 7,78,350 ಗಂಡು, 7,55,678 ಸ್ತ್ರೀ ಮತದಾರರು ಇದ್ದಾರೆ. ಒಟ್ಟು 15,34, 036 ಮತದಾರರು ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಶೇ.100 ರಷ್ಟು ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಪ್ರಸ್ತುತ ಚುನಾವಣೆಯಲ್ಲಿ ಬಳಸಲಾಗುತ್ತಿದೆ ಎಂದರು. ಈ ಚುನಾವಣೆಯಲ್ಲಿ ಖಾಲಿ ವೋಟರ್ ಸ್ಲಿಪ್ಗಳನ್ನು ಮಾಸ್ಟರಿಂಗ್ ದಿನಾಂಕದಂದು ವಿತರಿಸಲಾಗುವುದು. ಭಾರತದ ಚುನಾವಣಾ ಆಯೋಗದ ಪ್ರಕಾರ, ಪಾರ್ಸ ಪೋರ್ಟ, ಡ್ರೈವಿಂಗ್ ಲೈಸೆನ್ಸ, ಆಧಾರ ಕಾರ್ಡ, ಮತದಾರರ ಚೀಟಿ, ಬ್ಯಾಂಕ್ ಪಾಸ್ ಬುಕ್, ಖಾಸಗಿ ಕಂಪನಿಗಳ ಐ ಕಾರ್ಡ ಅಥವಾ ಸಕರ್ಾರಿ ನೌಕರರಿಗೆ ಕಚೇರಿಯ ಗುರುತಿನ ಪತ್ರ. ನಿವೃತ್ತರಿಗೆ ಪೋಟೋ ಇರುವ ಪಿಚಂಣಿ ಕಾರ್ಯ ಹೇಗೆ ಯಾವುದಾರರೂ ಒಂದು ಗುರುತಿನ ಚೀಟಿ ನಡೆಯುತ್ತದೆ ಎಂದರು.
ಮತಗಟ್ಟೆಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ನೀಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇವರಿಗೆ ನೀಲಿ ಬಣ್ಣದ ಮತಗಟ್ಟೆಯನ್ನು ರೂಪಿಸಲಾಗುತ್ತಿದೆ. 12913 ವಿಕಲಚೇತನ ಮತದಾರರು ಇದ್ದು, ಇವರ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ವ್ಯವಸ್ಥೆ ಸಹ ಮಾಡಲಾಗಿದೆ .ಅಂಧರಿಗೆ ಬ್ರೇನ್ ಲಿಪಿ ಮಾದರಿಯ ಸೌಲಭ್ಯ ವ್ಯವಸ್ಥೆ ಮಾಡಲು ಯೋಚಿಸಲಾಗುತ್ತಿದೆ. ವಾಹನ ನಿಲ್ಲಲು ಸಹ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ವಿಕಲಚೇತನ ಅಧಿಕಾರಿಗಳನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ಮಹಿಳಾ ಸಿಬ್ಬಂದಿ:
ಚುನಾವಣಾ ಕರ್ತವ್ಯಕ್ಕೆ ಮಹಿಳಾ ಸಿಬ್ಬಂದಿಗಳನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೇಮಕಮಾಡಲಾಗುವುದು. ಸಾಧ್ಯವಾದರೆ ಆಯಾ ತಾಲೂಕುಗಳಲ್ಲಿ ನಿಯೋಜಿಸಲು ಪ್ರಯತ್ನ ಮಾಡಲಾಗುವುದು. ಮತಗಟ್ಟೆ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ನೋಡಿಕೊಳ್ಳಲು ಶಿಕ್ಷಣಾಧಿಕಾರಿ ವಿ.ಜಿ.ನಾಯ್ಕ ಅವರನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಮೂರು ಸುತ್ತಿನ ತರಬೇತಿ ನೀಡಲಾಗುವುದು ಎಂದರು. ತರಬೇತಿಗೆ ತೆರಳುವವರಿಗೆ ವಿಶೇಷ ಬಸ್ ಸೌಕರ್ಯ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1108 ಸೇವಾ ಮತದಾರರಿಗೆ ವಿದ್ಯುನ್ಮಾನ ರವಾನಿತ ಅಂಚೆ ಮತಪತ್ರಗಳ ವ್ಯವಸ್ಥೆ ಮಾಡಿ ಇ-ಮತಪತ್ರ ನೀಡಲಾಗಿದೆ. ಒಟ್ಟು 175 ಸಾರಿಗೆ ಬಸ್ ,132 ಇತರೆ ವಾಹನಗಳನ್ನು ಮತಗಟ್ಟೆ ಅಧಿಕಾರಿಗಳು ಹಾಗೂ ಮತ ಪೆಟ್ಟಿಗೆ ಇವಿಎಂ ರವಾನೆಗೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ವಿವರಿಸಿದರು.
2 ನಡುಗಡ್ಡೆ ಮತ ಕೇಂದ್ರ:
ದೇವಕಾರು ಮತ್ತು ಐಗಳ ಕುವರ್ೆ ಎರಡು ಮತಗಟ್ಟೆಗಳು ದ್ವೀಪಗಳಾಗಿರುವುದರಿಂದ ಎರಡು ದೋಣಿಗಳನ್ನು ಈಗಾಗಲೇ ಬಾಡಿಗೆ ಪಡೆಯಲಾಗಿದೆ ಎಂದರು. 92 ಮತದಾನ ಕೇಂದ್ರಗಳು ಮೊಬೈಲ್ ಮತ್ತು ದೂರವಾಣಿ ಸಂಪರ್ಕ ಇಲ್ಲದ ಕೇಂದ್ರಗಳಿವೆ. ಇಲ್ಲಿ ವಯರ್ ಲೆಸ್ ಸಂಪರ್ಕ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಈ ಮತ ಕೇಂದ್ರಗಳಲ್ಲಿ ಇಬ್ಬರು ರನ್ನರ್ ನೇಮಿಸಲಾಗಿದೆ ಎಂದರು. 114 ಸೆಕ್ಟರ್ ಅಧಿಕಾರಿಗಳ ತಂಡ,36 ಫ್ಲೈಯಿಂಗ್ ಸ್ಕ್ವಾಡ್ಗಳು, 29 ಚೆಕ್ ಪೋಸ್ಟಗಳಿಗೆ 176 ಎಸ್ಎಸ್ಟಿ ತಂಡಗಳನ್ನು , ತಲಾ 6 ಆಕೌಂಟಿಂಗ್ ಟೀಮ್ಗಳನ್ನು ನೇಮಿಸಲಾಗಿದೆ. ರಾಜಕೀಯ ಪಕ್ಷಗಳು ಪ್ರಚಾರ ಪರವಾನಿಗೆ, ಸಭೆ ಸಮಾರಂಭಗಳಿಗೆ ಅನುಮತಿ, ವಾಹನ ಬಳಕೆ ಅನುಮತಿ ಪಡೆಯಲು ಮತ್ತು ಅನುಮತಿಗೆ 24 ಗಂಟೆಗಳಲ್ಲಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ದೂರು ಉಸ್ತುವಾರಿ ಕೊಶವನನು ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ತೆರೆಯಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಹರೀಶ್ ಕುಮಾರ್ ವಿವರಿಸಿದರು. ಜಿಲ್ಲೆಯಲ್ಲಿ ಒಟ್ಟು 8579 ಸಂಖ್ಯೆ ಬಂದೂಕುಗಳಿಗೆ ಲೈಸೆನ್ಸ ಇದ್ದು, ಅವಗಳನ್ನು ಸಂಬಂಧಿತರು ಠಾಣೆಯಲ್ಲಿ ಜಮಾ ಮಾಡಲು ಸೂಚಿಸಲಾಗಿದೆ ಎಂದರು.
2 ಸಖಿ ಗುಲಾಬಿ ಮಾದರಿ ಮತಗಟ್ಟೆ :
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ರಂತೆ ಸಖಿ ಸುಲಾಬಿ ಮಾದರಿ ಮತಗಟ್ಟೆಗಳನ್ನು , ಜಿಲ್ಲೆಯಲ್ಲಿ ಒಟ್ಟು 12 ಗುಲಾಬಿ ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದೆ. ಈ ಮತಗಟ್ಟೆಗಳಿಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ಉದ್ದೇಶಿಸಲಾಗಿದೆ. ಸದರಿ ಮತಗಟ್ಟೆಗಳಲ್ಲಿ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಎಸ್ಪಿ ವಿನಾಯಕ ಪಾಟೀಲ, ಸಿಇಓ ಮೊಹಮ್ಮದ್ ರೋಶನ್ , ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಇದ್ದರು