14ರಂದು ಲೋಕ ಅದಾಲತ್ ಕಾರ್ಯಕ್ರಮ
ಇಂಡಿ 11: ದಿ. 14ರಂದು ಇಂಡಿ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಡಿ ಶಾಖೆಯ ಕೃಷಿ ಅಧಿಕಾರಿ ಪ್ರಕಾಶ್ ಗುಜ್ಜಲಕ್ ಅವರು ಇಂಡಿ ತಾಲ್ಲಕಿನ ತಡವಲಗಾ ಗ್ರಾಮದ ಬಲಬೀಮ ದೇವಾಲಯದ ಆವರಣದಲ್ಲಿ ರೈತರಿಗೆ ಸಲಹೆಯನ್ನು ನೀಡಿ ಮಾತನಾಡಿದ ಅವರು ರೈತರು ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಇಂಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಅಧಿಕಾರಿ ಆನಂದ ಹೂಗಾರ, ಹಾಗೂ ಗ್ರಾಮದ ಹಿರಿಯರಾದ ಕಾಮಣ್ಣ ಮಿರ್ಜಿ ಅಶೋಕ್ ಕಟ್ಟಿ ಮರುಳಸಿದ್ದಪ್ಪ ನಡಗೇರಿ(ಶಿಕ್ಷಕರು) ಅರ್ಜುನ್ ಗಣವಲಗಾ, ಕಾಂತು ಕ್ಷೇತ್ರಿ ಸುರೇಶ್ ಸಾರವಾಡ ಸೇರಿದಂತೆ ಅನೇಕರು ರೈತರು ಉಪಸ್ಥಿತರಿದ್ದರು.