ನವದೆಹಲಿ, ಏ 14,ಲಾಕ್ ಡೌನ್ ಜಾರಿ ವಿಚಾರವಾಗಿ ಕೇಂದ್ರ ಮತ್ತು ರಾಜ್ಯದ ಆದೇಶಗಳು ಜನತೆಯನ್ನು ಗೊಂದಲಕ್ಕೆ ನೂಕಿವೆ. ಪ್ರಧಾನಿ ಆದೇಶ ಹೊರಬೀಳುವ ಮೊದಲೇ 11 ರಾಜ್ಯಗಳು ಇದೇ 30 ವರೆಗೆ ವಿಸ್ತರಣೆ ಮಾಡಿದ್ದು ಹೀಗಾಗಿ ಗೊಂದಲ ಮುಂದುವರೆದಿದೆ. ಇಂದು ಪ್ರಧಾನಿ ನರೇಂದ್ರ ಮೊದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿ ಲಾಕ್ ಡೌ ನ್ ಅವದಿ ಮಂದಿನ ತಿಂಗಳ 3 ರಂದು ಕೊನೆಯಾಗಲಿದೆ ಎಂದು ಹೇಳಿದ್ದಾರೆ . ಇದು ಜಗತ್ತಿನಲ್ಲೆ ಅತಿ ಉದ್ದನೆ ಲಾಕಡೌ ನ್ ಅಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮೇ 3ಕ್ಕೆ ಕೇಂದ್ರದ ಆದೇಶ ಮುಗಿಯಲಿದ್ದರೆ, ರಾಜ್ಯಗಳ ಆದೇಶ ಇದೇ 30 ಕ್ಕೆಕೊನೆಯಾಗಲಿದೆ.
ಆದರೆ ಇದಕ್ಕೂ ಮೊದಲೆ ದೇಶದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್, ಒಡಿಶಾ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ , ಪುದುಚೇರಿ ಮತ್ತು ಮಿಜೋರಾಂ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಏಪ್ರಿಲ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿಬಿಟ್ಟಿವೆ. ಭಾರತದ ಆರ್ಥಿಕತೆ ಕಳದೆ ಆರು ವರ್ಷಗಳಲ್ಲೆ ಬಹಳ ನಿಧಾನಗತಿಯಲ್ಲಿ ಸಾಗಿದ್ದು ತೀವ್ರ ಹೊಡೆತಕ್ಕೆ ಒಳಗಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದು , ದೇಶದಲ್ಲಿ ನಿರುದ್ಯೋಗವು ದಾಖಲೆಯ ಮಟ್ಟಕ್ಕೆ ಏರಿಕೆಯಾಗಬಹುದು ಎನ್ನಲಾಗಿದೆ.ಆರಂಭಿಕ 21 ದಿನಗಳ ಲಾಕ್‌ಡೌನ್ ಅನ್ನು ಉಲ್ಲೇಖಿಸಿರುವಂತೆ 'ವಿಶ್ವದ ಅತಿದೊಡ್ಡ ಲಾಕ್‌ಡೌನ್ ನಿಂದ ಭಾರತೀಯ ಆರ್ಥಿಕತೆಗೆ ಈಗಾಗಲೇ 8 ಟ್ರಿಲಿಯನ್ ರೂ.ನಷ್ಟ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ 40 ದಿನಗಳ ಲಾಕ್ ಡೌ ನ್ ನಂತರ ದೇಶದ ಆರ್ಥಿಕತೆಗೆ ಯಾವ ಪರಿ ಹೊಡತೆ ಬೀಳಬಹುದು ಎಂಬುದುನ್ನು ಊಹೆ ಮಾಡಿದರೆ ಅದರ ತೀವ್ರತೆ ಯಾರಿಗಾದರೂ ತಿಳಿಯಲಿದೆ.