ಲಾಕ್ ಡೌನ್ ತೆರವು ಏಕಪಕ್ಷೀಯ ತೀರ್ಮಾನ ಸಲ್ಲ : ಚಿದಂಬರಂ

ನವದೆಹಲಿ, ಏಪ್ರಿಲ್ 8,ಲಾಕ್‌ಡೌನ್ ಕೊನೆಗಾಣಿಸುವ ಮುನ್ನ, ಹಾಗೂ  ಇದರ ಬಗ್ಗೆ ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ  ರಾಜ್ಯಗಳ ಸಲಹೆ , ಅಭಿಪ್ರಾಯ ಕೇಳಬೇಕು   ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಒತ್ತಾಯ  ಮಾಡಿದ್ದಾರೆ. ಈ ಮೊದಲು  ಲಾಕ್‌ಡೌನ್ ಪರ ವಾದಿಸಿದ್ದ ಅವರು ಈಗ ಕೇಂದ್ರಕ್ಕೆ  ಈ ಸಲಹೆ ಕೊಟ್ಟಿದ್ದಾರೆ. ಬಡವರಿಗೆ ಸರ್ಕಾರ ನಗದು ಸಹಾಯ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ .ಏಪ್ರಿಲ್ 14 ರ ನಂತರ ಲಾಕ್ಡೌನ್ ಅನ್ನು ತೆಗೆದುಹಾಕುವುದರ ಬಗ್ಗೆ  ಕೇಂದ್ರ ಸರ್ಕಾರ  ರಾಜ್ಯಗಳ ಜೊತೆ  ಸಮಾಲೋಚಿಸಬೇಕು ಏಕ ಪಕ್ಷೀಯ ತೀರ್ಮಾನ ಬೇಡ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳಿ ಎಂದು  ಮನವಿ  ಎಂದು ಚಿದಂಬರಂ ಟ್ವೀಟ್ ನಲ್ಲಿ ತಿಳಿಸಿದ್ದಾರೆ.ಸರ್ಕಾರದಿಂದ ಒಂದು ರೂಪಾಯಿಯನ್ನು ಸಹ ಪಡೆಯದ  ಸಾಕಷ್ಟು ಬಡವರಿದ್ದಾರೆ ಅವರಿಗೂ  ಅನ್ಯಾಯವಾಗಬಾರದು   ಎಂದೂ  ಹೇಳಿದ್ದಾರೆ .