ನವದೆಹಲಿ, ಮೇ 13, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಇದೆ 18 ರಿಂದ ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆಗೆ ತೀರ್ಮಾನ ಮಾಡಿದ್ದು, ಅದರ ವಿವರ ಶುಕ್ರವಾರವೇ ಪ್ರಕಟವಾಗುವ ಸಾಧ್ಯತೆಯಿದೆ . ಮೇ 18 ರಿಂದ ಆರಂಭ ವಾಗುವ ಲಾಕ್ ಡೌನ್ 4.0 ಕುರಿತ ಹೊಸ ಮಾರ್ಗಸೂಚಿಯನ್ನು ಈಗಾಗಲೇ ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿದೆ ಎನ್ನಲಾಗಿದೆ. ಆದರೆ ಕೆಲ ರಾಜ್ಯಗಳಿಂದ ಸಲಹೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯಗಳ ಸಲಹೆಗಳನ್ನು ಆಧರಿಸಿ ಇದೆ 15 ರಂದೇ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.ಕೇಂದ್ರ ಗೃಹ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ನಾಲ್ಕನೇ ಹಂತದ ಲಾಕ್ ಡೌನ್ ಈವರೆಗಿನ ಮೂರು ಲಾಕ್ ಡೌನ್ ಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ.ಇದನ್ನು ನಿನ್ನೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಬಹಳಷ್ಟು ವಿನಾಯಿತಿ ಒಳಗೊಂಡಿರುತ್ತವೆ. ಬಹುತೇಕ ಎಲ್ಲಾ ವಲಯಗಳಿಗೂ ವಿನಾಯಿತಿ ದೊರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.