ಲೋಕದರ್ಶನ ವರದಿ
ಮಾಂಜರಿ 13: ಮಾರಕರೋಗ ಕೋವಿಡ್-19 ರೈತರನ್ನು ಸಂಕಷ್ಟಕ್ಕೆ ಸಿಲುಕಿದೆ, ಲಾಕ್ಡೌನ್ ದಿಂದಾಗಿ ಕಳೆದ ಒಂದುವರೆ ತಿಂಗಳಿಂದ ಜಾನುವಾರುಗಳ ಮಾರುಕಟ್ಟೆ ಬಂದ್ ಆಗಿ ಖರೀದಿ-ಮಾರಾಟ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಜಾನುವಾರುಗಳನ್ನು ಸಾಕಿದ ರೈತರಲ್ಲಿ ನಿರಾಸೆ ಮೂಡಿಸಿದೆ.
ಸಕರ್ಾರ ಮೂರನೇ ಹಂತದ ಲಾಕ್ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಹೊರಡಿಸಿದೆ. ಜಾನುವಾರು ಮಾರುಕಟ್ಟೆಯಲ್ಲಿ ನಡೆಯುವ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದರೈತರು ಮಾರಾಟ ಮಾಡದೆ ಹೊಲಗದ್ದೆಗಳಲ್ಲಿ ಕೈಚಲ್ಲಿ ಕುಳಿತಿದ್ದಾರೆ.
ಚಿಕ್ಕೋಡಿತಾಲೂಕಿನ ಅಂಕಲಿ ಗ್ರಾಮದಲ್ಲಿ ಮಾತ್ರ ಜಾನುವಾರು ಮಾರುಕಟ್ಟೆಯಿದೆ. ಈ ಮಾರುಕಟ್ಟೆಲ್ಲಿ ನೆರೆಯ ಮಹಾರಾಷ್ಟ್ರದ ಶಿರೊಳ, ಜತ್ತ ಮಿರಜ ತಾಲೂಕಿನ ಮತ್ತು ರಾಜ್ಯದ ರಾಯಬಾಗ, ಅಥಣಿ ತಾಲೂಕಿನ ರೈತರು ಇಲ್ಲಿ ಖರೀದಿ-ಮಾರಾಟ ಮಾಡಲು ಬರುತ್ತಾರೆ. ಈ ಬಾರಿಯ ಬಿಸಿಲಿನ ಧಗೆಯಿಂದಾಗಿ ಜಾನುವಾರುಗಳ ಪರಿಸ್ಥಿತಿ ಹೇಳತಿರಲಾಗುತ್ತಿದ್ದು, ಮೇವಿನ ಕೊರತೆಯಿಂದ ಬಹುತೇಕ ಜಾನುವಾರುಗಳು ಸಂಕಷ್ಟವನ್ನುಎದುರಿಸುತ್ತಿದ್ದು. ಜಾನುವಾರು ಮಾರುಕಟ್ಟೆ ಬಂದಾಗಿದ್ದರಿಂದ ಜಾನುವಾರುಗಳ ಜೊತೆಗೆ ಜಾನುವಾರುಗಳೂ ಸಹ ಸಂಕಷ್ಟ ಎದುರಿಸುವ ಪ್ರಸಂಗ ಬಂದೊದಗಿದೆ.
ಗಡಿಭಾಗದ ಪ್ರತಿಯೊಂದು ಗ್ರಾಮದಲ್ಲಿ ಒಕ್ಕಲು ತನದಜೊತೆಗೆ ಹೈನುಗಾರಿಕಾ ಉದ್ಯಮ ಮಾಡುತ್ತಿದ್ದು, ಚಿಕ್ಕೋಡಿತಾಲೂಕಿನಲ್ಲಿ ಪಂಚನದಿಗಳ ಕೃಪಾಕಟಾಕ್ಷ ವಿರುವದರಿಂದ ಬಹುತೇಕ ರೈತರು ಕಬ್ಬು, ಸೋಯಾ, ಹಣ್ಣು ಹಂಪಲ, ತರಕಾರಿ, ಹೆಚ್ಚಿನ ಪ್ರಮಾನದಲ್ಲಿ ಬೇಳೆಯುತ್ತಿದ್ದಾರೆ. ತಾಲೂಕಿನದಕ್ಷೀಣ ಮತ್ತು ಪೂರ್ವ ಭಾಗದಲ್ಲಿ ಮಾತ್ರ ಇತರ ಬೇಳೆಗಳನ್ನು ಬೇಳೆಯುತ್ತಾರೆ. ನದಿತೀರದ ಗ್ರಾಮಗಳು ಮತ್ತು ನೀರಾವರಿ ಸೌಲಭ್ಯವಿದ್ದರೈತರೂ ಸಹ ದನಗಳ ಮೇವು ಬೇಳೆದುಕೊಳ್ಳದೆ ಇರುವುದರಿಂದ ದನಗಳ ಮೇವಿಗಾಗಿ ಪರದಾಡಿ ಸಂಗ್ರಹಿಸುವ ಪ್ರಸಂಗ ಬಂದೂದಗಿದೆಅದಲ್ಲದೆ ಪ್ರಸಕ್ತ ಸಾಲಿನ ಬಿಸಿಲಿನ ಧಗೆಗೆ ಜಾನುವಾರುಗಳು ತಡಪಡಿಸುತ್ತಿವೆ, ಇದೆಲ್ಲವನ್ನು ನೋಡಿ ಮಾರಾಟ ಮಾಡಬೇಕಾದರೆ ಮಾರುಕಟ್ಟೆ ಬಂದಾಗಿದ್ದರಿಂದ ಸುಮ್ಮನೆ ಕುಳಿತುಕೊಳ್ಳುವ ಪ್ರಸಂಗ ಬಂದೂದಗಿದೆಎನ್ನುತ್ತಿದ್ದಾರೆ ಜಾನುವಾರುಗಳನ್ನು ಸಾಕಿದ ರೈತರು.