ಲಾಕ್ಡೌನ್ ಸಡಿಲಿಕೆ, ಮದ್ಯಪ್ರೀಯರಿಗೆ ದಿಲ್ಖುಷ್

ಲೋಕದರ್ಶನವರದಿ

ತಾಳಿಕೋಟೆ04:  ಪಟ್ಟಣದಲ್ಲಿ 4 ಸೋಮವಾರರಿಂದ ಲಾಕ್ಡೌನ್ ತೆರವು ಎಂಬ ಆದೇಶ ಹೊರಬಿದ್ದ ದಿನವೇ ಪಟ್ಟಣದಲ್ಲಿಯ ಎಲ್ಲ ಅಂಗಡಿ ಮುಗ್ಗಟ್ಟುಗಳು ಪ್ರಾರಂಭವಾದುದ್ದಲ್ಲದೇ ವ್ಯಾಪಾರ ವೈಹಿವಾಟಗಳು ಜನಜಂಗುಳಿ ನಡುವೆಯೇ ಈ ಹಿಂದಿನಂತೆ ನಡೆದಿದ್ದು ಕಂಡುಬಂದಿತು.

ಕಪ್ಪಡ, ಕಿರಾಣ, ಸ್ಟೇಷನರಿ ಅಂಗಡಿಗಳು ಒಳಗೊಂಡಂತೆ ಅಡತ್ ವ್ಯಾಪಾರ ವೈಹಿವಾಟಗಳು ಪ್ರಾರಂಭಗೊಂಡವು ಆದರೆ ಕೆಲವು ಜನರು ಮಾಸ್ಕ್ ಧರಿಸಿದ್ದರೆ ಇನ್ನೂ ಕೆಲವು ಜನರು ಮಾಸ್ಕ್ ದರಿಸದೇ ರಾಜಾರೋಶವಾಗಿ ಹಾಗೆ ತಮ್ಮ ವಸ್ತುಗಳನ್ನು ಖರೀದಿಸುತ್ತಿರುವದು ಹಾಗೂ ಸಂತೆ ಬಜಾರವನ್ನು ಸುತ್ತಾಡುತ್ತಿರುವದು ಕಂಡುಬಂದಿತು.

ಸಕರ್ಾರದ ನಿಯಮದಂತೆ ಕೆಲವೆಡೆ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದರೆ ಮತ್ತೊಂದೆಡೆ ಬಂದುದ್ದು ಬರಲಿ ಸದ್ಗುರುವಿನ ದಯಯೊಂದಿರಲಿ ಎಂಬಂತೆ ಸಂತೆ ಬಜಾರದಲ್ಲಿ ಕೆಲವು ಅಂಗಡಿ ಮುಗ್ಗಟ್ಟುಗಳ ಮುಂದೆ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ವೈಹಿವಾಟು ನಡೆಸಿದ್ದರು, ಇನ್ನೂ ಕೆಲವೆಡೆ ಒಬ್ಬರಿಗೊಬ್ಬರು ಹತ್ತಿಕೊಂಡೇ ತಿರುಗಾಡುತ್ತಿರುವ ದೃಶ್ಯ ಕಂಡುಬಂದಿತು. ಈ ದೃಶ್ಯ ಕಣ್ಮರೆಯಾಗಲಿ ಸಕರ್ಾರದ ನಿಯಮದಂತೆ ಸಾಮಾಜಿಕ ಅಂತರ ಪಾಲಿಸಲಿ, ಮಾಸ್ಕ್ ದರಿಸಲಿ ಎಂಬ ಸದುದ್ದೇಶಹೊತ್ತ ಪೊಲೀಸ್ ಇಲಾಖೆಯ ಪಿ.ಎಸ್.ಆಯ್.ವಸಂತ ಬಂಡಗಾರ ಅವರು ಸ್ವತಃ ಪೊಲೀಸ್ ವಾಹನದಲ್ಲಿ ಕುಳಿತು ಪ್ರಚಾರ ಪಡಿಸಿ ಸೈರನ್ ಒದರಿಸಿ ಜನಜಾಗೃತಿ ಮೂಡಿಸುತ್ತಿದ್ದು ಕಂಡುಬಂದಿತು.

ಸರಾಯಿ ಅಂಗಡಿ ತೆರೆಯಲು ಅಬಕಾರಿ ಅಧಿಕಾರಿಗಳು ಬಂದು ಮದ್ಯದ ಬಾಟಲಿಗಳ ಸ್ಟಾಕ್ಲಿಸ್ಟ್ ತಪಾಸಣೆ ನಡೆಸುತ್ತಿರುವದನ್ನು ಸಹಿಸದ ಸರಾಯಿ ಪ್ರೀಯರು ಗದ್ದಲವನ್ನುಂಟು ಮಾಡಿದರಲ್ಲದೇ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆದುಕೊಳ್ಳುವ ರೀತಿಯಲ್ಲಿ ಕೊಲುಗಳಿಂದ ಅಂಗಡಿಕಾರರ ರಚಿಸಿದ ಮಾರ್ಗದಲ್ಲಿಯೇ ನಿಂತು ಕೂಡಲೇ ಸರಾಯಿ ಬಾಟಲಿ ನೀಡಿ ಎಂದು ಹಣ ನೀಡಲು ನಾ ಮುಂದು ನೀಮುಂದು ಎಂಬಂತೆ 1 ಘಂಟೆಕಾಲ ಮದ್ಯ ಪ್ರೀಯರು ಸಾಲಾಗಿ ನಿಂತು ಬ್ರ್ಯಾಂಡಿ, ವಿಸ್ಕಿ, ಬಾಟಲಿಗಳನ್ನು ಪಡೆದುಕೊಂಡು ಹೋದರು. ಸಕರ್ಾರ ನಿಗದಿಪಡಿಸಿದ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಿದರೆ ಇನ್ನೂ ಕೆಲವರು ಗದ್ದಲಮಯ ವಾತಾವರಣ ಸೃಷ್ಠಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಕೆಲವು ಪ್ರಜ್ಞಾವಂತ ನಾಗರಿಕರಿಗೆ ಬೇಸರವನ್ನು ತಂದಿತು.

ಈ ಎಲ್ಲ ನಡೆದ ಪದ್ದತಿಯನ್ನು ವಿಕ್ಷೀಸಿದ ಕೆಲವು ಪ್ರಜ್ಞಾವಂತ ಜನತೆ ಈ ಹಿಂದೆ ಮಾಡಿದ ಲಾಕ್ಡೌನ್ ಪದ್ದತಿ ಸರಿ ಇತ್ತು ಒಮ್ಮೇಲೆ ಸಡಿಲುಗೊಳಿಸಿರುವದು ಇದು ಮುಂಬರುವ ದಿನಮಾನಗಳಲ್ಲಿ ಎಲ್ಲರ ಜೀವಕ್ಕೆ ಆತಂಕ ಸೃಷ್ಠಿಯಾಗುವಂತೆ ಕಾಣುತ್ತದೆ ಎನ್ನುವದು ಕೇಳಿಬಂದಿತಲ್ಲದೇ ಸಕರ್ಾರದ ನಿಯಮದಂತೆ ಎಲ್ಲರೂ ಪಾಲಿಸಿದರೆ ಜನ ಜೀವನ ಒಳ್ಳೆಯ ರೀತಿಯಿಂದ ಸುದಾರಣೆಯತ್ತ ಸಾಗಲು ಅನುಕೂಲವಾಗುತ್ತದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದವು.ಒಟ್ಟಿನಲ್ಲಿ ಕೊರೊನಾ ವೈರಸ್ ಎಂಬ ಮಹಾಮಾರಿಯ ಚಿಂತೆ ಇಲ್ಲದಂತೆ ಜನತೆ ಈ ಹಿಂದಿನಂತೆ ತಮ್ಮ ತಮ್ಮ ಅಗತ್ಯ ದಿನಸುಗಳನ್ನು ಖರೀದಿಸಿಕೊಂಡು ಹೊದರಲ್ಲದೇ ವ್ಯಾಪಾರಸ್ಥರೂ ಸಹ ಗಿರಾಕಿಗಳಿಗೆ ಸಕರ್ಾರದ ನಿಯಮ ತಿಳಿಸುತ್ತಾ ತಮ್ಮ ವೈಹಿವಾಟನ್ನು ನಡೆಸಿಕೊಂಡು ಹೋದರು.

ಒಟ್ಟಿನಲ್ಲಿ ಜನತೆಯ ಇಂದಿನ ಸ್ಥಿತಿಗತಿ ನಡೆ ನುಡಿಗಳನ್ನು ನೋಡಿದರೆ ಬಂದದ್ದು ಬರಲಿ ಸದ್ಗುರುವಿನ ದಯೆಯೊಂದಿರಲಿ ಎಂಬುದರ ಬಗ್ಗೆ ಕಂಡುಬಂದಿದ್ದು ಕಡಿಮೇನಿಲ್ಲಾ.