ಬೆಟಗೇರಿ ಗ್ರಾಮದ ಅಭಿವೃದ್ಧಿಗೆ ಸ್ಥಳೀಯರು ಸಹಕರಿಸಿ: ಶಿವಾನಂದ ಪತ್ತಾರ
Locals should cooperate for the development of Betageri village: Shivananda Pattara
ಲೋಕದರ್ಶನ ವರದಿ
ಬೆಟಗೇರಿ 30 : ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಪತ್ತಾರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಗುರುವಾರ ಜುಲೈ.30 ರಂದು ನಡೆದ ಕರ ವಸೂಲಿ ಕಾರ್ಯಕ್ರಮದ ಪ್ರಯುಕ್ತ ಇಲ್ಲಿಯ ಗ್ರಾಪಂ ವ್ಯಾಪ್ತಿಯ ಗ್ರಾಮದ ಮನೆ, ಅಂಗಡಿ, ಮುಂಗಟ್ಟುಗಳಿಗೆ ಅವರು ತೆರಳಿ ಕರ ಪಾವತಿಸಿಕೊಂಡು ಮಾತನಾಡಿ ಅವರು, ಸ್ಥಳೀಯರು ಕರ ಪಾವತಿಸಿ, ಗ್ರಾಪಂ ಸಹಯೋಗದಲ್ಲಿ ಬೆಟಗೇರಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದರು.
ಗೋಕಾಕ ತಾಪಂ ಇಒ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಮನೆ, ಅಂಗಡಿ, ಮುಂಗಟ್ಟುಗಳಿಗೆ ಗ್ರಾಪಂ ಸಿಬ್ಬಂದಿ ತೆರಳಿ ಕರ ಪಾವತಿಸಿಕೊಳ್ಳುವ ಕಾರ್ಯಕೈಗೊಂಡಿದ್ದಾರೆ. ಗ್ರಾಮದ ಗ್ರಾಮಸ್ಥರು ತಮ್ಮ ಮನೆ, ಅಂಗಡಿ, ಮುಂಗ್ಗಟ್ಟುಗಳ ಹಾಗೂ ಮತ್ತೀತರ ಕರಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಅವರಲ್ಲಿ ಕೊಡಲೇ ಪಾವತಿಸಿಕೊಳ್ಳಬೇಕು ಎಂದು ಇಲ್ಲಿಯ ಗ್ರಾಪಂ ಪಿಡಿಒ ಶಿವಾನಂದ ಪತ್ತಾರ ಅವರು ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ, ಶಿವಾನಂದ ಐದುಡ್ಡಿ, ವಿಠ್ಠಲ ಚಂದರಗಿ, ಬಸವರಾಜ ಪಣದಿ, ಈರ್ಪ ದಂಡಿನ, ಮೆಳೆಪ್ಪ ಹರಿಜನ, ಅರ್ಜುನ ಹರಿಜನ, ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 