ಬೈಲಹೊಂಗಲ: ಸ್ಥಳೀಯ ಗುತ್ತಿಗೆದಾರರು ಕೆಲಸವಿಲ್ಲದೆ ಪರದಾಟ

ಲೋಕದರ್ಶನ ವರದಿ 

ಬೈಲಹೊಂಗಲ ೦೬:  ಹೊರಗಿನ ಗುತ್ತಿಗೆದಾರರು ಕಡಿಮೆ ದರದಲ್ಲಿ ಟೆಂಡರ್ ಹಾಕುತ್ತಿರುವದರಿಂದ ಸ್ಥಳೀಯ ಗುತ್ತಿಗೆದಾರರು ಕೆಲಸವಿಲ್ಲದೆ ಪರದಾಡುವಂತಾಗಿದೆ ಎಂದು ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಶಿವಾನಂದ ಮಡಿವಾಳರ  ಹೇಳಿದರು.

        ಅವರು ದಿ. 05ರಂದು ತಮ್ಮ ಕಾಯರ್ಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಹೊರಗಿನ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಸಾರ್ವಜನಿಕ ವಲಯದಿಂದ ಗುತ್ತಿಗೆದಾರರಿಗೆ ಕೆಟ್ಟ ಹೆಸರು ಬರುತ್ತಿದೆ. ಇ-ಪ್ರೊಕ್ಯುರಮೆಂಟ್ ಭಾಗವಹಿಸಿ, ಕಡಿಮೆ ದರಕ್ಕೆ ಟೆಂಡರ್ ಪಡೆಯುತ್ತಿರುವದರಿಂದ ಈ ಸಮಸ್ಯೆ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದರು.

   ಬೇರೆ ತಾಲೂಕಿನ ಗುತ್ತಿಗೆದಾರರು ಶೇ.20 ರಿಂದ 30 ಕಡಿಮೆ ದರಕ್ಕೆ ಕಾಮಗಾರಿ ಪಡೆದು ಕಳಪೆ ಕಾಮಗಾರಿಯಲ್ಲಿ ತೊಡಗಿದ್ದಾರೆ ಕಾಮಗಾರಿಗಳು ಗುಣಮಟ್ಟ  ಕಾಯ್ದುಕೊಳ್ಳುತ್ತಿಲ್ಲದ್ದಿರುವದು ಸಾರ್ವಜನಿಕ ವಲಯದಲ್ಲಿ ಚಚರ್ೆಗೆ ಗ್ರಾಸವಾಗಿದ್ದು, ಮೇಲಾಧಿಕಾರಿಗಳು ಇದರತ್ತ ಗಮನ ಹರಿಸಿದ್ದಾದರೆ ಇದು ಪರಿಹಾರವಾಗುವದು.

      ತಾಲೂಕಿನಲ್ಲಿ ಸುಮಾರು 150 ಕ್ಕಿಂತ ಹೆಚ್ಚು ಗುತ್ತಿಗೆದಾರರಿದ್ದು ಇದರಲ್ಲಿ ಕೆಲವರಿಗೆ ಮಾತ್ರ ಕೆಲಸ ಸಿಗುತ್ತಿದೆ. ಇನ್ನೂಳಿದವರ ಜೀವನ ಈ ಕೆಲಸದ ಮೇಲೆ ಅವಲಂಬಿತವಾಗಿದೆ. ಗುತ್ತಿಗೆದಾರರಿಗಷ್ಟೆ ಅಲ್ಲದೆ ಕಾಮರ್ಿಕರು ಕೆಲಸವಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಬೈಲಹೊಂಗಲ ಗುತ್ತಿಗೆದಾರರು ಬೇರೆ ತಾಲೂಕಿನಲ್ಲಿ ಟಂಡರ್ ಹಾಕಲು ಹೋದರೆ ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಟೆಂಡರಗೆ ಭಾಗವಹಿಸದಂತೆ ತಾಕೀತು ಮಾಡುತ್ತಾರೆ. ಇದರಿಂದ ನಮಗೆ ಕೆಲಸ ಸಿಗುತ್ತಿಲ್ಲ. ಅದೇ ಗುತ್ತಿಗೆದಾರರು ಬೈಲಹೊಂಗಲದಲ್ಲಿ ಹಾಕಿದರೆ ಅವರಿಗೆ ಕೆಲಸ ಸಿಗುತ್ತದೆ ಎಂದರು.

   ಸ್ಥಳೀಯ ಸಂಘಟಣೆಗಳ ಸಹಕಾರದಿಂದ ಹೊರಗಿನ ಗುತ್ತಿಗೆದಾರರ ವಿರುದ್ದ ಪ್ರತಿಭಟಿಸಲು ಸಂಘವು ನಿರ್ಧರಿಸಿದೆ ಎಂದರಲ್ಲದೆ,

   ಸರಕಾರ ಕೋಟ್ಯಾಂತರ ರೂಪಾಯಿಗಳ ಕಾಮಗಾರಿಗಳನ್ನು ಪ್ಯಾಕೆಜ್ ಮಾಡಿ ಓರ್ವ ಗುತ್ತಿಗೆದಾರನಿಗೆ ನೀಡುವ ಬದಲು ಪಿಸ್ ವರ್ಕ ಟೆಂಡರದ  ಮಾಡಿ ಗುತ್ತಿಗೆ ನೀಡುವದರಿಂದ ಹತ್ತಾರು ಗುತ್ತಿಗೆದಾರರಿಗೆ ಕೆಲಸ ಸಿಗುತ್ತದೆ. ಅಲ್ಲದೆ ನೂರಾರು ಕೂಲಿ ಕಾಮರ್ಿಕರ ಬದುಕಿಗೆ ಅನುಕೂಲವಾಗಲಿದೆ ಎಂದರು.

      ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಪಂಚಾಯತ್ ರಾಜ ಇಂಜನೀಯರಿಂಗ ವಿಭಾಗದ ಸೈಟ್ ಇಂಜನೀಯರ ರಾಘವರೆಡ್ಡಿ ಗುತ್ತಿಗೆದಾರರ ಬಿಲ್ಲ ಕೆಲಸಕ್ಕೆ ವರ್ಷಗಟ್ಟಲೇ ಕಚೇರಿಗೆ ಅಲೆದಾಡಿಸುತ್ತಾರೆ. ಈ ಕುರಿತ ಮೇಲಾಧಿಕಾರಿಗಳು ಗೊತ್ತಿದ್ದರೂ ಸುಮ್ಮನೆ ಇದ್ದಾರೆ. ಕೂಡಲೇ ಕ್ರಮ ಜರುಗಿಸದಿದ್ದರೆ ಪ್ರತಿಭಟಣೆಗೆ ಇಳಿಯುವ ಎಚ್ಚರಿಕೆ ನೀಡಿದರು.  

  ಸಿ.ಜಿ. ನಾಗನಗೌಡರ, ಉದಯ ಬೆಳಗಾವಿ, ಮಡಿವಾಳಪ್ಪ ಚಿಕ್ಕೋಪ್ಪ, ಸಿ.ಜಿ.ವಿಭೂತಿಮಠ, ನಿಂಗಪ್ಪ ಕುರಿ, ಎಸ್.ವಾಯ್.ದಿವಾನ್, ಉದಯ ಬೆಳಗಾವಿ, ಬಿ.ಎಂ.ಸುತಗಟ್ಟಿ, ಎಸ್.ಎ.ಗಾಣಿಗೇರ, ಎಂ.ಡಿ.ಮತ್ತಿಕೊಪ್ಪ, ವಾಯ್.ಬಿ.ಮದನಭಾಂವಿ, ವಿ.ಬಿ.ಬಾರಿಮರದ, ಎ.ಎಸ್.ಹೊಸೂರ, ಎಸ್.ಎಸ್.ಬಡಿಗೇರ, ಚನ್ನಪ್ಪ ಚಪ್ಪಳಿ, ಲತೀಫ ಹುದ್ದಾರ, ರಫೀಕ ದೇಶನೂರ, ಎ.ಎಮ.ಬಾಗವಾನ ಇದ್ದರು.