ಗದಗ: ಗದಗ ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳ 123 ವಾರ್ಡಗಳ ಜನಪ್ರತಿನಿಧಿಗಳ ಆಯ್ಕೆಗೆ ಇಂದು ಶಾಂತಿಯುತವಾಗಿ ಮತದಾನ ಜರುಗಿತು. ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗದಗ ತಾಲೂಕಿನ ಮುಳಗುಂದ, ಬಸಾಪುರ, ಶಿರಹಟ್ಟಿ ಪಟ್ಟಣ ಪಂಚಾಯತಿಯ ಖಾನಾಪುರ ಹಾಗೂ ಹರಿಪುರ ಮತದಾನ ಕೇಂದ್ರಗಳು ಸೇರಿದಂತೆ ಎಲ್ಲ ಆರು ಸ್ಥಳೀಯ ಸಂಸ್ಥೆಗಳ ಆಯ್ದ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದರು.