ದಾಸೋಹ ಗುಣದಿಂದ ಬದುಕು ಸಾರ್ಥಕ: ರಾಮಲಿಂಗಯ್ಯ ಶ್ರೀ

Living with Dasoha quality is worthwhile: Sri Ramalingaiah

ದಾಸೋಹ ಗುಣದಿಂದ ಬದುಕು ಸಾರ್ಥಕ: ರಾಮಲಿಂಗಯ್ಯ ಶ್ರೀ  

ತಾಳಿಕೋಟಿ 28: ಶರಣ ಪರಂಪರೆಯಲ್ಲಿ ದಾನ, ದಾಸೋಹಗಳಿಗೆ ಬಹಳಷ್ಟು ಮಹತ್ವವನ್ನು ನೀಡಲಾಗಿದೆ. ದಾಸೋಹ ಗುಣದಿಂದಾಗಿ ಒಬ್ಬ ಭಕ್ತ ದೇವರ ಸಂಪ್ರೀತಿಯನ್ನು ಗಳಿಸಬಹುದು ಇವು ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಒಯ್ಯುತ್ತವೆ ಎಂದು ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.  

ತಾಲೂಕಿನ ಪಡೇಕನೂರ ಗ್ರಾಮದ ದಾಸೋಹ ವಿರಕ್ತ ಮಠದ ಜಾತ್ರೋತ್ಸವದ ಅಂಗವಾಗಿ ಬುಧುವಾರ ಹಮ್ಮಿಕೊಂಡ ಸಾಮೂಹಿಕ ವಿವಾಹ ಹಾಗೂ ಮಾನವ ಏಕತಾ ಧರ್ಮಸಭೆಯ ಸಮ್ಮುಖ ವಹಿಸಿ ಅವರು ಆಶೀರ್ವಚನ ನೀಡಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಂಗಮರಿಗೆ ದಾನ ನೀಡಿ ಶಿವನ ಒಲುಮೆಗೆ ಪಾತ್ರಳಾದಳು,ಗುಡ್ಡಾಪುರದ ದಾನಮ್ಮ ದಾನವನ್ನು ಮಾಡಿ ದಾನಮ್ಮಲಾದಳು, ಇದೇ ರೀತಿ ಪಡೇಕನೂರದ ಶ್ರೀ ಮಠದ ಭಕ್ತರು ಪಣತಿಯಲ್ಲಿನ ಎಣ್ಣೆ,ಅದರ ಬತ್ತಿಯಾಗಿ ಉರಿದಾಗ ಮಲ್ಲಿಕಾರ್ಜುನ ಶ್ರೀಗಳು ಬೆಳಗಿ ನಿಮಗೆ ಸದಾ ಜ್ಞಾನ ಹಾಗೂ ಸಂಸ್ಕಾರಗಳನ್ನು ನೀಡಿ ಸದಾ ನಿಮ್ಮೊಂದಿಗಿರುತ್ತಾರೆ ಎಂದರು.  

ಇಂಗಳೇಶ್ವರ ವಚನಶೀಲಾ ಮಂಟಪದ ಪೀಠಾಧಿಪತಿಗಳಾದ ಪರಮ ಶ್ರೀ ಚನ್ನಬಸವ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠದ ಪೂಜ್ಯರಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಎಚ್‌.ಎಸ್‌.ಪಾಟೀಲ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಸ್‌.ಪಾಟೀಲ ಹಾಗೂ ಪಡೇಕ ನೂರ ಗ್ರಾಮದ ಗಣ್ಯರು ಹಿರಿಯರು ಅಪಾರ ಭಕ್ತರು ಇದ್ದರು.