ಸಮಾಜಮುಖಿ ಕಾರ್ಯದಿಂದ ಬದುಕು ಸಾರ್ಥಕ

ಲೋಕದರ್ಶನವರದಿ

ಗುಳೇದಗುಡ್ಡ01: ಪ್ರತಿಯೊಬ್ಬರೂ ಜೀವನದಲ್ಲಿ  ಸಮಾಜಮುಖಿಯಾಗಿ  ಕಾರ್ಯ ನಿರ್ವಹಿಸುವುದರಿಂದ ಬದುಕು ಸಾರ್ಥಕವಾಗುತ್ತದೆ. ಸಮಾಜದಲ್ಲಿ ಉತ್ತಮ ಸಂಸ್ಕಾರ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಅದಕ್ಕೆ ಜವಳಿ ದಂಪತಿಗಳ ಸಮಾಜಮುಖಿ ಸೇವಾ ಕಾರ್ಯವೇ  ಸಾಕ್ಷಿಯಾಗುತ್ತದೆ ಎಂದು ಶ್ರೀ ಗುರುಸಿದ್ದೇಶ್ವರ ಬೃಹನ್ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು.

ಅವರು ಇಲ್ಲಿನ ಸಾಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ  ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಸಮಿತಿಯ  ಪದಾಧಿಕಾರಿ ಹಾಗೂ  ಸಾಮಾಜಿಕ ಕಳಕಳಿಯ  ಸಂಗಪ್ಪ ಹೋಮಣ್ಣ ಜವಳಿ ಅವರ ವೈವಾಹಿಕ ಬದುಕಿನ ಐವತ್ತು ವರ್ಷದ ಸಾರ್ಥಕ ಸುವರ್ಣ ಸಂಭ್ರಮ ಹಾಗೂ ವಿಶ್ವಗುರು ರೇವಣಸಿದ್ದೇಶ್ವರ ವಚನ ಗ್ರಂಥ ಲೋಕಾರ್ಪಣೆ ಹಾಗೂ ಗೌರವ ಸತ್ಕಾರ ಕಾರ್ಯಕ್ರಮದ ದಿವ್ಯ ಸನ್ನಿಧಾನ ವಹಿಸಿ ಆಶೀರ್ವಚನ ನೀಡಿದರು.

ವಿಶ್ವಗುರು ರೇವಣಸಿದ್ದೇಶ್ವರ ವಚನ ಗ್ರಂಥದ ಅಮೀನಗಡದ ಮಾತಾಜಿ ಚಿಕ್ಕಮಾಣಿಕೇಶ್ವರಿ ಅಮ್ಮನವರು ಮಾತನಾಡಿ, ಬದುಕು ಪಾವನಗೊಳ್ಳಲು ಪ್ರತಿಯೊಬ್ಬರು ವಚನ ಪಠಣ ಮಾಡಬೇಕು ಎಂದರು.

ಪ್ರಗತಿಪರ ಶಿಕ್ಷಣ ಸಂಸ್ಥೆಯ ಅಡಿವೆಪ್ಪ ತಾಂಡೂರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೃಷಿ ಸಂಶೋಧಕ ಡಾ.ಸಂಗಪ್ಪ ನಾರಾ ಅವರಿಗೆ ಗೌರವ ಸತ್ಕಾರ ಕಾರ್ಯಕ್ರಮ ಜರುಗಿತು. 

ಕೆರೂರದ ಡಾ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಮರಡಿಮಠದ ಶ್ರೀಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾಸ್ವಾಮಿಗಳು, ಸೇಗುಣಸಿ ವಿರಕ್ತಮಠದ ಶ್ರೀಮಹಾಂತ ಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದ್ದರು. ಡಾ.ಚಂದ್ರಕಾಂತ ಜವಳಿ, ಅನುರಾಧಾ ಪ್ರಭು ಜಿಡಗಿ ಮಾತನಾಡಿದರು.

   ಡಾ.ಬಿ.ಎಸ್.ಕೆರೂಡಿ, ಡಾ.ದಡ್ಡೆನ್ನವರ, ಡಾ.ನಾಗರಾಜ ಕುರಿ, ಡಾ.ತಾಂಡೂರ, ಡಾ.ಕೃಷ್ಣವರ್ಧನ, ಮಾಜಿ ಶಾಸಕ ಮಲ್ಲಿಕಾಜರ್ುನ ಬನ್ನಿ, ರಾಜಶೇಖರ ಶೀಲವಂತ, ಡಾ.ಬಸವರಾಜ ಬಂಟನೂರ, ರಾಜು ಜವಳಿ, ಚಂದ್ರಕಾಂತ ಶೇಖಾ, ಹೊಳಬಸು ಶೆಟ್ಟರ, ರಂಗಪ್ಪ ಶೇಬಿನಕಟ್ಟಿ, ಡಾ.ಚಂದ್ರಕಾಂತ ಜವಳಿ, ಅನುರಾಧಾ ಜಿಡಗಿ, ಪ್ರಭು ಮಾಲಗಿತ್ತಿಮಠ, ಸೂರ್ಯಕಾಂತ ಜವಳಿ  ಸೇರಿದಂತೆ ಇತರರು ಇದ್ದರು.

ವಿದ್ಯಾಥರ್ಿಗಳಿಗೆ ನೈತಿಕ ಬಲವನ್ನು ಹೆಚ್ಚಿಸಬೇಕು: ಶಾಸಕ ಸವದಿ