ನವದೆಹಲಿ,12 ಸಂಸತ್ತಿನಲ್ಲಿ
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದ ಸಿಂಧುತ್ವ
ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಭಾರತೀಯ
ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನಿರ್ಧರಿಸಿದೆ. ಸಂಸತ್ತಿನಲ್ಲಿ ಬುಧವಾರ ಮಸೂದೆ ಅಂಗೀಕಾರವಾದ
ನಂತರ ಸರಕಾರಕ್ಕೆಈಗ ಹೊಸ ಕಾನೂನು ಸಮಸ್ಯೆ ಎದುರಾಗಲಿದೆ
. ಪೌರತ್ವ ಮಸೂದೆ ಒಮ್ಮೆ ಸಂಸತ್ತಿನಲ್ಲಿ ಅಂಗೀಕಾರವಾದ ತಕ್ಷಣ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಐಯುಎಂಎಲ್ ಈ ಹಿಂದೆಯೇ ಹೇಳಿತ್ತುಧರ್ಮ ಆಧಾರಿತ ಪೌರತ್ವ
ಮಸೂದೆ ಜಾರಿಗೆ ತರುವ ಮೂಲಕ ಈ ಮಸೂದೆ ಸಂವಿಧಾನದ
14ನೇ ವಿಧಿಯನ್ನು ಉಲ್ಲಂಘನೆ ಮಾಡಿದೆ ಎಂದೂ ಅರ್ಜಿಯಲ್ಲಿ
ಆರೋಪಿಸಲಾಗಿದೆ. ಪೌರತ್ವ ತಿದ್ದುಪಡಿ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ
ಧಾರ್ಮಿಕ ಕಿರುಕುಳ, ದೌರ್ಜನ್ಯಕ್ಕೆ ಒಳಗಾದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು
ಅವಕಾಶ ಕಲ್ಪಿಸಲಿದೆ. ಪೌರತ್ವ ಮಸೂದೆ ಗೆ ಬುಧವಾರ
ರಾಜ್ಯಸಭೆ ಸಹ ಅಂಗೀಕಾರ ನೀಡಿದ್ದು ಇದರಿಂದ ಮಸೂದೆಗೆ
ಸಂಸತ್ತಿನ ಎರಡೂ ಸದನಗಳ ಅನುಮೋದನೆ ದೊರಕಿದಂತಾಗಿದೆ.