ಗುಳೇದಗುಡ್ಡ16: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವುದಕ್ಕಾಗಿ ನಿರಂತರ ಹೋರಾಟ ನಡೆಸಿದ ಡಾ.ಚಿದಾನಂದಮೂತರ್ಿ ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದು ಭಂಡಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಣ್ಣವೀರಣ್ಣ ದೊಡಮನಿ ಹೇಳಿದರು.
ಅವರು ಮಂಗಳವಾರ ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಾಹಿತಿ ಚಿ.ಮೂ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಆರ್.ಚೌಕಿಮಠ, ಡಾ.ಮಂಜಣ್ಣ, ಡಾ.ವಿ.ಎನ್.ಢಾಣಕಶಿರೂರ, ದೈಹಿಕ ಶಿಕ್ಷಣ ಉಪನ್ಯಾಸಕ ಸಿ.ಕೆ.ನಂದಾರ, ಸಂಗಮೇಶ ಚಿಕ್ಕಾಡಿ ಇತರರು ಇದ್ದರು.
ಸಾಹಿತ್ಯ ಬಳಗ ಸಂತಾಪ: ಹಿರಿಯ ಸಾಹಿತಿ ಸಂಶೋಧಕ ಚಿದಾನಂದ ಮೂತರ್ಿಯವರ ನಿಧನಕ್ಕೆ ತಾಲೂಕು ಸಾಹಿತ್ಯ ಪರಿಷತ್, ಕಜಾಪ, ರಂಗಚಿಂತನ ಸೇರಿದಂತೆ ಪಟ್ಟಣದ ಸಾಹಿತ್ಯ ಬಳಗದ ಸಂತಾಪ ಸೂಚಿಸಿದೆ.
ಚಿ.ಮೂ ಅವರನ್ನು ಕಳೆದುಕೊಂಡಿದ್ದು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಬಡವಾಗಿದೆ ಎಂದು
ತಾಲೂಕ ಕಸಾಪ ಅಧ್ಯಕ್ಷ ಸಿ.ಎಂ.ಜೋಶಿ, ನಾಟಕಕಾರ ಡಾ.ಭೀಮನಗೌಡ ಪಾಟೀಲ, ತಾಲೂಕ ಕಜಾಪ ಅಧ್ಯಕ್ಷ ಬಸವರಾಜ ಯಂಡಿಗೇರಿ, ಮಹದೇವ ಜಗತಾಪ, ರಾಜು ಪಾಗಿ, ಅಖಂಡೇಶ್ವರ ಪತ್ತಾರ, ಮಲ್ಲಿಕಾಜರ್ುನ ರಾಜನಾಳ, ಸುರೇಶ ಸಾರಂಗಿ, ಪಿ.ಯು.ಪಾಡಾ, ಚಂದ್ರಶೇಖರ ಕಾಳನ್ನವರ, ಪುರಸಭೆ ಸದಸ್ಯ ವಿನೋದ ಮದ್ದಾನಿ, ರಾಜು ಸಂಗಮ, ವಿನೋದ ಗಾಜಿ, ರಾಜು ಗೌಡರ, ಪ್ರದೀಪ ಕಂಚ್ಯಾಣಿ, ಬಿ.ವೈ.ಗೌಡರ, ಸುರೇಶ ಜುಟ್ಟಲಮಡ್ಡಿ, ಈರಣ್ಣ ದೊಡಮನಿ, ಚಂದ್ರಶೇಖರ ಹೆಗಡಿ, ಡಾ. ಯಾದವರಾಜ ಗಾಜಿಯವರ, ಸಾಗರ ಕೊಣ್ಣೂರ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.