ಸಾಹಿತಿ ಭಗತ್ ರಾಜಗೆ ‘ವ್ಯೋಮಾ ವ್ಯೋಮ’ ಪ್ರಶಸ್ತಿ

Literary writer Bhagat Raja receives 'Vyoma Vyoma' award

ಕಲಬುರಗಿ 22: ಡಾ. ಚೆನ್ನಣ್ಣ ವಾಲೀಕಾರ 83ನೆಯ ಹುಟ್ಟು ಹಬ್ಬ ದಂಗವಾಗಿ ಪ್ರಗತಿ ಪರ ಚಿಂತಕ, ಸಾಹಿತಿ ಭಗತ್ ರಾಜ ನಿಜಾಮಕಾರಿ ಅವರಿಗೆ ‘ವ್ಯೋಮಾ ವ್ಯೋಮ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಕಲಬುರಗಿ: ಬಂಡಾಯ ಸಾಹಿತ್ಯ, ಪ್ರಗತಿಪರ ವಿಚಾರಧಾರೆಯ ಹೋರಾಟಗಾರ ದಿವಂಗತ ಡಾ. ಚೆನ್ನಣ್ಣ ವಾಲೀಕಾರ ಅವರ 83ನೆಯ ವರ್ಷದ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರತಿ ವರುಷ ನೀಡುವ ರಾಜ್ಯ ಮಟ್ಟದ ‘ವ್ಯೋಮಾ ವ್ಯೋಮ’ ಪ್ರಶಸ್ತಿಯನ್ನು ಡಾ. ವಾಲೀಕಾರ ಅವರ ಶಿಷ್ಯ ಹಾಗೂ ಪ್ರಗತಿಪರ ಚಿಂತಕ, ಬಂಡಾಯ ಬರಹಗಾರ, ಸಂಘಟಕರಾಗಿರುವ ರಾಯಚೂರಿನ ಭಗತ್‌ರಾಜ ನಿಜಾಮಕಾರಿ ಅವರಿಗೆ ನೀಡಲು ಪ್ರಶಸ್ತಿ ಸಮಿತಿಯು ನಿರ್ಧರಿಸಿದೆ. 

ಡಾ. ಚೆನ್ನಣ್ಣ ವಾಲೀಕಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ್ಣಿ, ಉಪಾಧ್ಯಕ್ಷರಾದ ಪ್ರೊ. ಎಚ್‌.ಟಿ. ಪೋತೆ ಮತ್ತು ಡಾ. ಕೆ.ಎಸ್‌. ಬಂಧು, ವೇದಿಕೆ ಕಾರ್ಯದರ್ಶಿ ಅಪ್ಪಾಸಾಹೇಬ ವಾಲೀಕಾರ ಸೇರಿದಂತೆ ಆಯ್ಕೆ ಸಮಿತಿಯ ಸಭೆಯಲ್ಲಿ ಹಿರಿಯ ಲೇಖಕ ಭಗತರಾಜ ನಿಜಾಮಕಾರಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ತಿಂಗಳ 29.04.2025 ರಂದು ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಏರಿ​‍್ಡಸಲಿರುವ ದಿವಂಗತ ಡಾ. ಚೆನ್ನಣ್ಣ ವಾಲೀಕಾರ ಅವರ 83ನೆಯ ಹುಟ್ಟು ಹಬ್ಬದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು. ಪ್ರಶಸ್ತಿ ಪತ್ರ, ಸನ್ಮಾನ ನೆನಪಿನ ಕಾಣಿಕೆಯೊಂದಿಗೆ 5000 ರೂಗಳ ನಗದು ಕಾಣಿಕೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ.