ಕೊಪ್ಪಳ ಏಪ್ರಿಲ್ 28, ಸಂಗೀತಕ್ಕೆ ಅಪಾರವಾದ ಶಕ್ತಿ ಇದೆ ಸಂಗೀತ ಆಲಿಸುವುದರಿಂದ ಶಾಂತಿ ನೆಮ್ಮದಿ ಸಿಗುತ್ತದೆ ಜೊತೆಗೆ ಬಿಪಿ ಶುಗರ್ ಇದ್ದರೆ ಅದು ಕೂಡ ಕಂಟ್ರೋಲ್ ಗೆ ಬರುತ್ತದೆ ಎಂದು ಸೈಯದ್ ಫೌಂಡೇಶನ್ ನ ಅಧ್ಯಕ್ಷ ಹಾಗೂ ಸಮಾಜಸೇವಕ ಕೆಎಂ ಸೈಯದ್ ಹೇಳಿದರು.
ಅವರು ರವಿವಾರ ಸಂಜೆ ನಗರದ ಸಾಹಿತ್ಯ ಭವನದಲ್ಲಿ ರಫಿ ಮೆಲೋಡಿ ಸಂಸ್ಥೆ ವತಿಯಿಂದ ಈದ್ ಮಿಲನ್ ಪ್ರಯುಕ್ತ ಏರಿ್ಡಸಿದ ರಸಮಂಜರಿ ಕಾರ್ಯಕ್ರಮ ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಪ್ರತಿಯೊಬ್ಬ ಮನುಷ್ಯ ದಿನದ 24 ತಾಸುಗಳಲ್ಲಿ ಕನಿಷ್ಠ ಸ್ವಲ್ಪ ಸಮಯವಾದರೂ ಸಂಗೀತ ಆಲಿಸಿದರೆ ಮನಸ್ಸು ಉಲ್ಲಾಸ ಗೊಳ್ಳುತ್ತವೆ ಮಾನಸಿಕ ಸದೃಢತೆ ಬರುತ್ತದೆ ನಮ್ಮ ದೇಶದ ಸಂಗೀತದಲ್ಲಿ ಅಪಾರವಾದ ಶಕ್ತಿ ಅಡಗಿದೆ ಎಂದ ಅವರು ನಮ್ಮ ದೇಶದ ಮಹಾನ್ ಗಾಯಕ ಕಲಾವಿದರಾದ ಮೊಹಮ್ಮದ್ ರಫಿ ಕಿಶೋರ್ ಕುಮಾರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಡಾ. ರಾಜಕುಮಾರ್ ಸೇರಿದಂತೆ ಅನೇಕ ಮಹಾನ್ ಕಲಾವಿದರು ಹಾಡುವುದರ ಮೂಲಕ ಇಡೀ ಪ್ರಪಂಚದ ಹೃದಯವನ್ನು ಗೆದ್ದಿದ್ದಾರೆ ಇಂತಹ ಮಹಾನ್ ಕಲಾವಿದರ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಈ ದಿಶೆಯಲ್ಲಿ ಕೊಪ್ಪಳದ ಗಾಯಕ ಕಲಾವಿದರು ಏರಿ್ಡಸಿರುವ ಈ ರಸಮಂಜರಿ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸೈಯದ್ ಫೌಂಡೇಶನ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಎಂ ಸೈಯದ್ ಹೇಳಿದರು,ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ದೇಶದ ಕಲೆಯ ಪರಂಪರೆ ಸಂಗೀತ ಸಾಂಸ್ಕೃತಿಕ ಸಾಹಿತ್ಯ ಉಳಿಸಿ ಬೆಳೆಸಿಕೊಂಡು ಹೋಗುವದರ ಜೊತೆಗೆ ಮುಂದಿನ ಯುವ ಪೀಳಿಗೆಗೆ ಇದನ್ನು ಪರಿಚಯಿಸುವಂತೆ ಕೆಲಸ ಮಾಡಬೇಕಾಗಿದೆ ಎಂದರು.
ವೇದಿಕೆ ಮೇಲೆ ನಗರಸಭೆಯ ಮಾಜಿ ಸದಸ್ಯ ಎಂ ಪಾಷಾ ಮಾನ್ವಿ ಆಶ್ರಯ ಕಮಿಟಿ ಸದಸ್ಯ ಹುಸೇನ ಪೀರಾ ಮುಜಾವರ್, ನಿವೃತ್ತ ಶಿಕ್ಷಕ ಅಮೀರ್ ಹಮ್ಜಾ ನದಾಫ್, ಅಭಿಯಂತ ಗೋಪಾಲಕೃಷ್ಣ ,ಡಾ, ಭಾಗ್ಯಶ್ರೀ ,ಡಾ. ಮಾಜಿದ್, ಲಕ್ಷ್ಮಣ್ ಕುಣಿಕೇರಿ, ಆರೋಗ್ಯ ಇಲಾಖೆಯ ಗೀರೀಶ್ ,ಅಂಚೆ ಇಲಾಖೆಯ ಜಗದೀಶ್, ಏಎಸ್‌ಐ ಚಂದ್ರ್ಪ, ಅಲ್ಲದೆ ಮಾರುತಿ ದಿವಟರ್ ಮತ್ತು ಸೈಯದ್ ಇಮಾಮ್ ಹುಸೇನ್ ಸಿಂಧೋಗಿ ,ಮುಜಾಹಿದ್, ರಾಖಿ ಬೀಡಿ ಕಂಪನಿಯ ಮಾಲಕರಾದ ವಜೀರ್ ಸಾಬ್ ದಪೇದಾರ್ ಮತ್ತು ಸೈಯದ್ ಪಾಷಾ ಹೂಗಾರ್, ಅನೇಕರು ವೇದಿಕೆ ಮೇಲೆ ಪಾಲ್ಗೊಂಡಿದ್ದು. ಗಾಯಕರಾದ ಮೊಹಮ್ಮದ್ ರಫೀ , ದಾವೂದ್ ಹುನುಗುಂದ್, ವಿಜಯಲಕ್ಷ್ಮಿ, ಅಂಬಿಕಾ ಮತ್ತಿತರರು ಗಾಯನ ಹಾಡಿ ಜನಮನ ರಂಜಿಸಿದರೆ ಹಾಸ್ಯ ಕಲಾವಿದ ವಿಜಯಪುರದ ಯಾಸಿನ್ ಜಿಗರ್ ರವರು ಮಿಮಿಕ್ರಿ ಮಾಡುವುದರ ಜೊತೆಗೆ ಕಾರ್ಯಕ್ರಮದ ನಿರೂಪಣೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಜನಮನ ರಂಜಿಸಿದರು,