ಮ್ಯಾಡ್ರಿಡ್, ಆ 17 ಲಿಯೊನೆಲ್ ಮೆಸ್ಸಿ ಅವರು ಗಾಯದಿಂದಾಗಿ ಬಾರ್ಸಿಲೋನಾ ತಂಡದಿಂದ ಹೊರಗುಳಿದಿದ್ದ ಬೆನ್ನಲ್ಲೆ ಇದೀಗ ಲಾ ಲೀಗಾ ಟೂರ್ನಿಯ ಮೊದಲನೇ ಪದ್ಯದಲ್ಲಿ ಲೂಯಿಸ್ ಸೂರೆಜ್ ಅವರು ಕೂಡ ಗಾಯಕ್ಕೆ ತುತ್ತಾಗಿದ್ದಾರೆ.
ಶುಕ್ರವಾರ ನಡೆದ ಅಥ್ಲೇಟಿಕೋ ಬಿಲ್ಬಾವೊ ವಿರುದ್ಧದ ಲಾ ಲೀಗಾ ಟೂರ್ನಿಯ ಮೊದಲನೇ ಪಂದ್ಯದ 37ನೇ ನಿಮಿಷದಲ್ಲಿ ಲೂಯಿಸ್ ಸೂರೆಜ್ ಅವರು ಮೊಣಕಾಲು ಹಿಂಬದಿ ಗಾಯಕ್ಕೆ ತುತ್ತಾದರು. ಈ ವೇಳೆ ಅಂಗಳಕ್ಕೆ ಆಗಮಿಸಿದ್ದ ವೈದ್ಯರ ತಂಡ ಸೂರೆಜ್ ಅವರನ್ನು ಅಂಗಳದಿಂದ ಹೊರಕ್ಕೆ ಕರೆದೊಯ್ದರು.
ಇದೇ ತಿಂಗಳು ಆರಂಭದಲ್ಲಿ ಲಿಯೊನೆಲ್ ಮೆಸ್ಸಿ ಕೂಡ ಗಾಯಕ್ಕೆ ತುತ್ತಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಅವರು ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಸ್ಟಾರ್ ಮುಂಚೂಣಿ ಆಟಗಾರ ಲೂಯಿಸ್ ಸೂರೆಜ್ ಕೂಡ ಗಾಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಬಾರ್ಸಿಲೋನಾ ತಂಡಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ.