ಕೊಡಗಿನ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಕೊಪ್ಪಳದ ಲಯನ್ಸ್ ಕ್ಲಬ್


ಲೋಕದರ್ಶನ ವರದಿ

ಕೊಪ್ಪಳ: ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರಾಜ್ಯದ ಕೊಡಗು ಜಿಲ್ಲೆಯ ಸಂತ್ರಸ್ಥರ ನೆರವಿಗೆ ಧಾವಿಸಿರುವ ಕೊಪ್ಪಳ ನಗರದ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೈಸಗರ್ಿಕ ವಿಕೋಪಕ್ಕೆ ತುತ್ತಾದ ಜನತೆಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ 1 ಲಕ್ಷದ 1 ಸಾವಿರ ರೂ. ಗಳನ್ನು ಮಾನ್ಯ ಮುಖ್ಯಮಂತ್ರಿಗಳ ನೈಸಗರ್ಿಕ ವಿಕೋಪ ಪರಿಹಾರ ನಿಧಿಗೆ ಮಾನ್ಯ ಜಿಲ್ಲಾಧಿಕಾರಿಗಳು, ಕೊಪ್ಪಳ ಇವರ ಮೂಲಕ ಚೆಕ್ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲಯನ್ ಬಸವರಾಜ ಬಳ್ಳೊಳ್ಳಿಯವರು ಕೊಡಗು ಜಿಲ್ಲೆಯು ಜೀವಮಾನದಲ್ಲಿಯೇ ಕಂಡರಿಯದ ಜಲಪ್ರಳಯಕ್ಕೆ ತುತ್ತಾಗಿದ್ದು ಅತ್ಯಂತ ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ರಕ್ಷಣೆಗಾಗಿ ಜನರಲ್ ಕಾರ್ಯಪ್ಪ ಅವರನ್ನು ಒಳಗೊಂಡಂತೆ ಅನೇಕ ಯೋಧರ ಮಹಾ ಪಡೆಯನ್ನೇ ನೀಡಿ ತ್ಯಾಗ, ಬಲಿದಾನ, ದೇಶಪ್ರೇಮಕ್ಕೆ ಸಾಕ್ಷಿ ಪ್ರಜ್ಞೆಯಾಗಿರುವ ಕೊಡಗಿನ ನಮ್ಮ ಸಹೋದರ, ಸಹೋದರಿಯರು ಹಾಗೂ ಸಮಸ್ತ ಕೊಡಗಿನ ಜನತೆ ಈ ಭೀಕರ ಮಳೆಯ ಪ್ರವಾಹದಿಂದ ಪ್ರಕೃತಿ ವಿಕೋಪದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮವಾಗಿ ಮನೆ, ಆಸ್ತಿ ಹಾಗೂ ಇದ್ದಂತಹ ಕನಿಷ್ಟ ಸೌಲಭ್ಯಗಳನ್ನು ಕಳೆದುಕೊಂಡು ಜನತೆ ಬೀದಿಗೆ ಬಂದಿದ್ದಾರೆ. ಜೀವನ ಕಟ್ಟಿಕೊಳ್ಳಲು ಪರದಾಡುತ್ತಿರುವ ಜನರ ಬದುಕಿಗೆ ಆಸರೆಯಾಗಬೇಕಾಗಿದೆ. ಇದಕ್ಕೆ ಸಮಸ್ತ ನಾಡಿನ ಜನತೆ ತಮ್ಮ ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಮಾತನಾಡಿ ನೊಂದ ಹೃದಯಗಳಿಗೆ, ಬೆಂದ ಜೀವಗಳಿಗೆ ಆಸರೆಯಾಗಲು ನಮ್ಮ ಕೊಪ್ಪಳದ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್ ಯಾವಾಗಲೂ ಸಹಾಯ ಹಸ್ತ ನೀಡಲು ಮುಂದಿರುತ್ತದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲಯನ್ ವಿರೇಶ ಹತ್ತಿ ಮತ್ತು ಕಾರ್ಯದಶರ್ಿಗಳಾದ ಲಯನ್ ವೆಂಕಟೇಶ ಶಾನಭಾಗ ಹಾಗೂ ಲಯನ್ಸ್ ಎಸ್.ವ್ಹಿ.ಇ.ಎಮ್. ಶಾಲಾ ಅಧ್ಯಕ್ಷರು ಲಯನ್ ವಿರೂಪಾಕ್ಷಪ್ಪ ಅಗಡಿ ಮತ್ತು ಶಾಲಾ ಕಾರ್ಯದಶರ್ಿಗಳಾದ ಲಯನ್ ಬಸವರಾಜ ಬಳ್ಳೋಳ್ಳಿ ಇವರು, ಲಯನ್ಸ್ ಕ್ಲಬ್ನ ಸದಸ್ಯರಾದ ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಪರಮೇಶ್ವರಪ್ಪ ಕೊಪ್ಪಳ, ಲಯನ್ ಶಾಂತಣ್ಣ ಮುದುಗಲ್, ಲಯನ್ ಮಲ್ಲಿಕಾಜರ್ುನ ಬಳ್ಳೊಳ್ಳಿ, ಲಯನ್ ಮಹೇಶ ಮಿಟ್ಟಲಕೊಡ, ಲಯನ್ ಪ್ರಭು ಹೆಬ್ಬಾಳ, ಲಯನ್ ಪಂಪಣ್ಣ ವಾರದ, ಲಯನ್ ಚಂದ್ರಕಾಂತ ತಾಲೇಡಾ, ಲಯನ್ ನಂದಕಿಶೋರ ಸುರಾಣಾ ಹಾಗೂ ಇತರೆ ಎಲ್ಲಾ ಸದಸ್ಯರು ಪಾಲ್ಗೊಂಡು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪರಿಹಾರದ ಚೆಕ್ನ್ನು ನೀಡಿದರು.