ಲಿಂಗೈಕ್ಯ ಬಸವ ಪ್ರಭು ದೇವರ ಧರ್ಮ ಸೇವೆ ಸ್ಮರಣೀಯ: ಕಸ್ತೂರಿ

ಲಿಂಗೈಕ್ಯ ಬಸವ ಪ್ರಭು ದೇವರ ಧರ್ಮ ಸೇವೆ ಸ್ಮರಣೀಯ: ಕಸ್ತೂರಿ  Lingayikya Basava Prabhu's religious service is memorable: Kasturi

ತಾಳಿಕೋಟೆ 15 : ಅಗಲಿದ ಚೇತನ, ಖ್ಯಾತ ಪ್ರವಚನಕಾರ, ವಾಗ್ಮಿ, ಕವಿ, ಲೇಖಕ, ಬಸವ ಪ್ರಭುದೇವರು ಕೈಲಾಸ ಪೇಟೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪಟ್ಟಣದ ತಾಲ್ಲೂಕಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಬೆಳಿಗ್ಗೆ ಶಿವಾಜಿ ಚೌಕದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಗಂಗಾಧರ ಕಸ್ತೂರಿ, ತಾಳಿಕೋಟೆ ಪಟ್ಟಣದಲ್ಲಿ ಶರಣಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಬಹುತರವಾದ ಕೊಡುಗೆ ನೀಡಿದವರು ಬಸವಪ್ರಭುದೇವರು, ಆಧ್ಯಾತ್ಮ ಮತ್ತು ಅನುಭಾವದ ಮೇರುಶಿಖರವಾಗಿದ್ದರು.  

ಮೌಢ್ಯಗಳ ವಿರುದ್ದವಾಗಿ ಸದಾ ಚಾಟಿ ಬೀಸುತ್ತಿದ್ದ ಅವರು, ಸರಳ ನಡೆನುಡಿಗಳಿಂದ ಸಜ್ಜನಿಕೆಯಿಂದ ಎಲ್ಲರ ಮನ ಗೆದ್ದಿದ್ದರು. ಕಾಶಿಗೆ ತೆರಳಿ ವೇದ, ಶಾಸ್ತ್ರ, ಸಂಸ್ಕೃತ ಅಧ್ಯಯನ ಮಾಡಿದ್ದ ಅವರು ಹಲವು ಭಾಷೆಗಳ ಮೇಲೆ ಪಾಂಡಿತ್ಯ ಹೊಂದಿದ್ದರು. ಪುರಾಣ, ಪ್ರವಚನಗಳಲ್ಲಿ ತಮ್ಮ ಹಾಸ್ಯಪೂರಿತ ಮಾತುಗಳಿಂದ ಬದುಕಿನ ಅನುಭಾವವನ್ನು ಜನತೆಗೆ ಹಂಚುತ್ತ ಆಧ್ಯಾತ್ಮದ ಬದುಕನ್ನು ಸರಳೀಕರಿಸಿದ್ದರು.  

ತಮ್ಮ ನೋವನ್ನು ಹಂಚದೇ ನಗು, ಸಂತೋಷವನ್ನೇ ಸದಾ ಹಂಚುತ್ತಿದ್ದ ಅವರು, ಜೀವಿತಾವಧಿಯಲ್ಲಿ ಶ್ವೇತವಸ್ತ್ರಧಾರಿಗಳಾಗಿ ಬಸವಾದಿ ಪ್ರಮಥರ ವಚನಗಳನ್ನು ಮನೆಮನಗಳಿಗೆ ಮುಟ್ಟಿಸಿದವರು ಎಂದರು. ಶರಣರ ತ್ರಿಪದಿ, ನಾಮಾವಳಿ, ಕವನ ಸಂಕಲನ, ಆಧುನಿಕ ವಚನಗಳು, ಜನಪದ, ಭಕ್ತಿ ಗೀತೆಗಳು, ವಿಡಂಬನಾ ಕೃತಿಗಳನ್ನು ರಚಿಸಿದ್ದಾರೆ ಎಂದರು. ಎಸ್‌.ಎಸ್,ಗಡೇದ ನುಡಿನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಆರಂಭದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಗೌರವ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಾಹೇಬಗೌಡ ಬಿರಾದಾರ, ಈರಣ್ಣ ಕಲಬುರ್ಗಿ, ಕಾಶಿನಾಥ ಸಜ್ಜನ, ಜಗದೀಶ ಬಿಳೇಭಾವಿ, ಅಶೋಕ ಚಿನಗುಡಿ, ಈರಣ್ಣ ಜಿಗಜಿನ್ನಿ, ಜೈಸಿಂಗ ಮೂಲಿಮನಿ, ರಾಜು ದೇಗಿನಾಳ, ಬಸವರಾಜ ಕುಂಬಾರ, ಶಿವಲಿಂಗಪ್ಪ ಪಾಲ್ಕಿ, ಸಂಗಮೇಶ ಪಾಲ್ಕಿ, ಅಪ್ಪು ಕಲ್ಲೂರ, ಅಶೋಕ ಬಳಗಾನೂರ, ಗುಂಡುರಾವ ಧನಪಾಲ, ಮಲ್ಲಿಕಾರ್ಜುನ ಹಿಪ್ಪರಗಿ, ಮಂಜುನಾಥ ಶೆಟ್ಟಿ, ಆರಿ​‍್ವ,ಜಾಲವಾದಿ, ಜಿ.ಎಸ್,ಜಮ್ಮಲದಿನ್ನಿ, ಶಿವರಾಜ ಚೌಧರಿ, ವಿಶ್ವನಾಥ ಕತ್ತಿ, ಅಪ್ಪುಗೌಡ ಪಾಟೀಲ, ಭೀಮಣ್ಣ ಸೂಳಿಭಾವಿ, ಉಮಾ ಸಾಲಂಕಿ, ಪ್ರಶಾಂತ ಅಂಬಿಗೇರ, ವೈ.ಬಿ.ಬಡಿಗೇರ, ಶಶಿ ಮೂಕಿಹಾಳ, ಮಹಾಂತೇಶ ಸಜ್ಜನ, ಇತರರಿದ್ದರು.