ಇಂಡಿ 10: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಲಿಂಗೈಕ್ಯ ಮಾಹಾತಪಸ್ವಿ ಶ್ರೀ ಗುರುಲಿಗೇಶ್ವರ ಶಿವಾಚಾರ್ಯರ 81 ನೇ ಪುಣ್ಯಾರಾಧನೆಯ ನಿಮಿತ್ತವಾಗಿ ಪುರಾಣ ಮಾಹಾಮಂಗಲ ಹಾಗೂ ಧರ್ಮಸಭೆ ಮತ್ತು ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ತಡವಲಗಾ ಗ್ರಾಮದ ಹೀರೆಮಠ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಪರಮ ಪೂಜ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡಿ ಮಾತನಾಡಿದ ಜೈನಾಪುರದ ರೇಣುಕ ಶಿವಾಚಾರ್ಯರು ಮುತ್ತೈದೆಯರಿಗೆ ಉಡಿತುಂಬವ ಕೆಲಸ ಪುಣ್ಯದ ಕೆಲಸ. ನಮ್ಮ ನೆಲದ ಸಂಸ್ಕೃತಿ, ಮುಂದಿನ ಪೀಳಿಗೆಗೆ ಅಚ್ಚುಕಟ್ಟಾಗಿ ಮುಂದುವರೆಸುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ. ಹಾಗಾಗಿ ನಾವೆಲ್ಲ ಮಹಿಳೆಯರಿಗೆ ಪೂಜ್ಯನೀಯ ಸ್ಥಾನದಲ್ಲಿಟ್ಟಿದ್ದೇವೆ ಎಂದರು.ಪರಮ ಪೂಜ್ಯ ವೆಂಕಟೇಶ್ವರ ಸ್ವಾಮಿಗಳು ಮಾತನಾಡಿ ಈ ಸಮಾಜ ಬದಲಾವಣೆಯ ಹಾಗೂ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಎರಡನ್ನು ಸಮನಾಗಿ ಈ ಸಮಾಜಕ್ಕೆ ಕೊಡುವಲ್ಲಿ ಮಠಮಾನ್ಯಗಳ ಪಾತ್ರ ದೊಡ್ಡದು. ಅದರಂತೆ ತಾಯಂದಿರು ಕೂಡ ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ, ರೂಢಿಸುವ ಕೆಲಸ ಮಾಡಲಿ ಎಂದರು. ಈ ಸಂದರ್ಭದಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯರು ಗೋರನಾಳದ ಡಾ.ವೀರುಪಾಕ್ಷ ದೇವರು. ತಡವಲಗಾದ ಅಭಿನವ ಶಿವಯೋಗೇಂದ್ರ ದೇವರು ಆಶಿರ್ವಚನ ನೀಡಿ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಗುರುಮೂತಯ್ಯ ಹಿರೇಮಠ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ, ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷರಾದ ಭಾರತಿ ವಾಲಿ, ಅಶೋಕ ಮಿರ್ಜಿ, ಗುರುಬಸಪ್ಪ ಜೂಲ್ಪಿ,ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್ ಬಿ ಕೆಂಬೋಗಿ, ರಮೇಶ ಬಗಲಿ, ಸೋಮಶೇಖರ ಬ್ಯಾಳಿ, ಮಾಹಾಂತೇಶ ಪಾಟೀಲ, ಗಂಗಾಧರ ಬಡಿಗೇರ, ಧರೇಪ್ಪ ಡಂಗಿ, ವಾಯ್ ಎಸ್ ಮೇಡೆದಾರ, ಶ್ರೀಮಂತ ಜೂಲ್ಪಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.