ಲೋಕದರ್ಶನವರದಿ
ರಾಣೇಬೆನ್ನೂರು20: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಈ ಭಾಷೆ ಕಲಿಯಲು ಮತ್ತು ಮಾತನಾಡಲು ಸುಲಿದ ಬಾಳೆ ಹಣ್ಣಿನಂತೆ, ಬಹು ಸುಲಭ ಮತ್ತು ಸರಳ ಇಂತಹ ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾಥರ್ಿ ಪರಿಪೂರ್ಣ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ|| ಒಡೆಯರ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಸ್ಥಳೀಯ ಮೃತ್ಯುಂಜಯ ನಗರದ ಚನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಚನ್ನಮಲ್ಲಿಕಾಜರ್ುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ ಆಶ್ರಯದಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 214ನೇ ಹುಣ್ಣಿಮೆಯ ಮಾಸಿಕ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಇಂಗ್ಲೀಷ್ ವ್ಯಾಮೋಹ ಬಿಟ್ಟು ಮಾತೃಭಾಷೆ ಕನ್ನಡದಲ್ಲಿಯೇ ಮಕ್ಕಳಿಗೆ ವಿದ್ಯೆ ಕಲಿಸಲು ಮುಂದಾಗಬೇಕು.
ಇಂದು ಸಕರ್ಾರ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಮಾಪರ್ಾಡು ಮಾಡುತ್ತಿರುವುದು ಶುಭ ಸೂಚನೆಯಲ್ಲ, ಆದರೆ ಮಕ್ಕಳಿಗೆ ಇಂಗ್ಲೀಷ್ ಜ್ಞಾನ ಬೇಕು, ಆದರೆ ಕನ್ನಡ ಅಳಿಸಿ ಆಂಗ್ಲಭಾಷೆ ಕಲಿಯುವುದು ಬೇಡ, ಹಿಗಾಗಿ ಎಲ್ಲ ತಾಯಂದಿರು ಕನ್ನಡ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಶ್ರೀಗಳು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಾದ ಪ್ರಶಾಂತ ಕೆ, ಸಂಜನಾ ಪಾಟೀಲ, ಸಾವಿತ್ರಾ ದೊಡ್ಮನಿ, ಐಶ್ವರ್ಯ ದೇವಗಿರಿ, ಸಹನಾ ವಿ, ವಿದ್ಯಾ ಬಿ.ಎ, ಮಧು ಕೋಟಿಹಾಳ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗುರುರಾಜ ಪಾಟೀಲ ಅವರು ಕನ್ನಡ ಭಾಷೆಯ ಇತಿಹಾಸ ಹಾಗೂ ಕನ್ನಡದ ಅಳಿವು ಉಳಿವು ಕುರಿತು, ವಿ.ವಿ.ಹರಪನಹಳ್ಳಿ ಸಕರ್ಾರ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಮಾಪರ್ಾಡು ಮಾಡುತ್ತಿರುವುದರಿಂದ ಆಗುವ ದುಷ್ಟರಿಣಾಮ ಕುರಿತು, ನಿವೃತ್ತ ಶಿಕ್ಷಕ ಜೆ.ಎಂ. ಮಠದ ಅವರು ಕನ್ನಡ ಸಾಹಿತ್ಯ ಜಾನಪದ ಸಂಸ್ಕೃತಿ ಕುರಿತು ಮಾತನಾಡಿದರು, ಅ.ಸಿ.ಹಿರೇಮಠ, ಕಸ್ತೂರಿ ಪಾಟೀಲ, ಮಂಜುಳಾ ಪಾಟೀಲ ಸೇರಿದಂತೆ ಪಾಲಕರು ಮತ್ತಿತರರು ಪಾಲ್ಗೊಂಡಿದ್ದರು.