ಲೋಕದರ್ಶನ ವರದಿ
ಗಂಗಾವತಿ 21: ಲಿಖೈ ಪ್ರತಿನಿಧಿಗಳ ಸಂಘ ಎಲ್ಐಸಿ ಪ್ರತಿನಿಧಿಗಳ ಮತ್ತು ಗ್ರಾಹಕರ ಹಿತಕಾಯುವ ಕೆಲಸ ಮಾಡುತ್ತದೆ ಎಂದು ಎಲ್ಐಸಿ ಪ್ರತಿನಿಧಿಗಳ ಸಂಘ(ಲಿಖೈ)ದ ದಕ್ಷಿಣ ಮಧ್ಯ ವಲಯದ ಅಧ್ಯಕ್ಷ ಎಲ್.ಮಂಜುನಾಥ ಹೇಳಿದರು.
ಅವರು ನಗರದ ಕನ್ನಡ ಜಾಗೃತಿ ಭವನದಲ್ಲಿ ಎಲ್ಐಸಿ ಪ್ರತಿನಿಧಿಗಳ ಸಂಘ (ಲಿಖೈ)ದ ಗಂಗಾವತಿ ಶಾಲೆಯ ವಾರ್ಷಕಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಸದೃಢ ಆಥರ್ಿಕ ಶಕ್ತಿಯಲ್ಲಿ ಎಲ್ಐಸಿ ಪಾತ್ರ ಮಹತ್ವದ್ದಾಗಿದೆ. ಗ್ರಾಹಕರ ಹಣವನ್ನು ಸುರಕ್ಷಿತವಾಗಿಟ್ಟು ಅವರ ಕುಟುಂಬದ ಆಥರ್ಿಕ ಭದ್ರತೆ ನೀಡಲಾಗುತ್ತದೆ. ಗ್ರಾಹಕರ ಮಾಡಿಸಿದ ಪಾಲಿಸಿಗೆ ಬೋನಸ್ ಸೇರಿ ಮೆಚುರಿಟಿ ಹಣವನ್ನು ವ್ಯವಸ್ಥಿತಿವಾಗಿ ತಲುಪಿಸುವ ಏಕೈಕ ಸಂಸ್ಥೆಯಾಗಿದ್ದು ಪ್ರತಿ ವರ್ಷ ಬೋನಸ್ ಹಾಗೂ ಗ್ರಾಹಕರ ಆಥರ್ಿಕ ಅವಸರಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇಂತಹ ಸಂಸ್ಥೆಯನ್ನು ಅಸ್ಥಿರಗೊಳಿಸುವ ಹುನ್ನಾರು ನಡೆದಿದ್ದು ಪ್ರತಿನಿಧಿಗಳು ಮತ್ತು ಗ್ರಾಹಕರು ಕೇಂದ್ರ ಸರಕಾರ ಜನಪ್ರತಿನಿಧಿಗಳಿಗೆ ಎಚ್ಚರಿಸಬೇಕಿದೆ. ಲಾಭದಾಯಕ ಸಂಸ್ಥೆಗಳಲ್ಲಿ ಎಲ್ಐಸಿ ಹಣವನ್ನು ತೊಡಗಿಸುವ ಸಂಸ್ಥೆಯ ಉದ್ದೇಶವನ್ನು ಕೇಂದ್ರ ಸರಕಾರ ತಡೆಯು ಯತ್ನ ನಡೆಸಿ ಆಥರ್ಿಕ ದಿವಾಳಿಯಾಗಿರುವ ಐಡಿಬಿಐ ಸೇರಿ ನಷ್ಟದಲ್ಲಿರುವ ಬ್ಯಾಂಕ್ ಮತ್ತು ಆಥರ್ಿಕ ವಲಯದಲ್ಲಿ ಎಲ್ಐಸಿ ಹಣ ತೊಡಗಿಸುವ ಶಿಫಾರಸ್ಸನ್ನು ಸಂಘ ಖಂಡಿಸುತ್ತದೆ. ಪ್ರತಿನಿಧಿಗಳ ಕಮೀಷನ್ ಸೇರಿ ಹಲವು ಸೌಲಭ್ಯಗಳಿಗೆ ಕೇಂದ್ರ ಸರಕಾರ ಮತ್ತು ಐಆರ್ಡಿಎ ಕತ್ತರಿ ಹಾಕುವ ಷಡ್ಯಂತ್ರವನ್ನ ಸಂಘ ಪ್ರತಿಭಟನೆ ಮೂಲಕ ವಿರೋಧಿಸಿದೆ. 2014ರಿಂದ ಜಾರಿಗೆ ಬಂದಿರುವ ಪಾಲಿಸಿಗಳನ್ನು ಎರಡು ವರ್ಷಗಳ ನಂತರ ಪುನರುಜ್ಜೀವನಗೊಳಿಸಲು ವಿಧಿಸಿರುವ ತಡೆಯನ್ನು ತೆಗೆದುಹಾಕುವಂತೆ ಒತ್ತಡ ಹೇರಲಾಗಿದೆ. ಇದರಿಂದ ಜನಸಾಮಾನ್ಯರು ಸೇರಿ ಎಲ್ಐಸಿ ಮಾಡಿಸುವ ಗ್ರಾಹಕರಿಗೆ ತೊಂದರೆಯಾಗಿದ್ದು ಎರಡು ವರ್ಷಗಳ ನಿಬಂಧನೆ ತೆಗೆಯುವಂತೆ ಸಂಘ ಪತ್ರ ಬರೆದಿದೆ. ಲಿಖೈ ಸಂಘಟನೆ ಸಂವಿಧಾನದಂತೆ ಕಾರ್ಯನಿವರ್ಾಹಿಸುತ್ತಿದ್ದು ಎಲ್ಐಸಿ ಪ್ರತಿನಿಧಿಗಳು ಮತ್ತು ಗ್ರಾಹಕರ ಹಿತಕಾಯುವ ಕಾರ್ಯವನ್ನು ಸದಾ ಮಾಡುತ್ತಿದೆ. ದೇಶದ ಜನರು ಖಾಸಗಿ ವಿಮಾ ಸಂಸ್ಥೆಗಳಲ್ಲಿ ಪಾಲಿಸಿ ಮಾಡಿಸುವುದು ಸೇರಿ ಹಣ ಹೂಡಿಕೆ ಸುರಕ್ಷಿತವಲ್ಲ. ಎಲ್ ಐಸಿಯಲ್ಲಿ ಹಣ ಹೂಡಿದರೆ ದೇಶದ ಹಿತಕ್ಕಾಗಿ ಹಣ ಬಳಕೆಯಾಗುತ್ತದೆ ಎಂದರು.
ಎಲ್ಐಸಿ ವ್ಯವಸ್ಥಾಪಕ ಬಷೀರ್ ಅಹಮದ್ ಮಾತನಾಡಿ, ಎಲ್ಐಸಿ ಭಾರತದ ಹೆಮ್ಮೆಯ ಸಂಸ್ಥೆಯಾಗಿದ್ದು ಕಳೆದ 6 ದಶಕಗಳಿಂದ ದೇಶದ ಆಥರ್ಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.ದೇಶದ ಜನರು ಎಲ್ಐಸಿಯಲ್ಲಿ ಪಾಲಿಸಿ ಮಾಡಿಸಿ ಹಣ ಹೂಡುವುದು ಸುರಕ್ಷಿತ ಈ ಹಣ ದೇಶ ಕಟ್ಟಲು ಉಪಯೋಗವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಲಿಖೈ ವಿಭಾಗೀಯ ಕಾರ್ಯದಶರ್ಿ ಸೋಮಯ್ಯ, ನಿರುಪಾದಿ ಬೆಣಕಲ್, ಶಾಖಾ ಘಟಕದ ಅಧ್ಯಕ್ಷ ಕೆ.ನಿಂಗಜ್ಜ, ಕಶರ್ಯದಶರ್ಿ ಕಾಜವಲಿ, ಪದಾಧಿಕಾರಿಗಳಾದ ವಲಿಮೋಹಿಯುದ್ಧಿನ್, ರಾಘವೇಂದ್ರ ದೇಸಾಯಿ ಸೇರಿ ಅನೇಕರಿದ್ದರು.